alex Certify ಡಾಮಿನೋಸ್​ ಪಿಜ್ಜಾ ಟ್ರೇ ಮೇಲೆ ಟಾಯ್ಲೆಟ್​ ಬ್ರಶ್​: ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಎಂದ ಪಿಜ್ಜಾ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾಮಿನೋಸ್​ ಪಿಜ್ಜಾ ಟ್ರೇ ಮೇಲೆ ಟಾಯ್ಲೆಟ್​ ಬ್ರಶ್​: ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಎಂದ ಪಿಜ್ಜಾ ಸಂಸ್ಥೆ

ರುಚಿಕರವಾದ ಪಿಜ್ಜಾ ಸ್ಲೈಸ್​ ಸಿಗುತ್ತೆ ಅಂದರೆ ಬೇಡ ಎಂದು ಹೇಳುವವರ ಸಂಖ್ಯೆ ತುಂಬಾನೆ ಕಡಿಮೆ. ಇಟಾಲಿಯನ್​​ನ ಈ ಖಾದ್ಯದ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರಿಬಿಡುತ್ತದೆ. ಆದರೆ ಡೊಮಿನೋಸ್​ನ ಬೆಂಗಳೂರಿನ ಔಟ್​ಲೆಟ್​ ಒಂದರಿಂದ ವೈರಲ್​ ಆಗಿರುವ ಈ ಫೋಟೋವನ್ನು ನೋಡಿದರೆ ಇನ್ನು ಪಿಜ್ಜಾ ತಿನ್ನಲು ವಾಕರಿಕೆ ಎನಿಸಬಹುದು.

ಟ್ವಿಟರ್​ ಬಳಕೆದಾರರಾದ ತುಷಾರ್​ ಎಂಬವರು ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಇದು ಬೆಂಗಳೂರಿನ ಡಾಮಿನೋಸ್​ ಔಟ್​ಲೆಟ್​ ಒಂದರ ಫೋಟೋ ಎನ್ನಲಾಗಿದೆ. ಇಲ್ಲಿ ಪಿಜ್ಜಾವನ್ನು ಮಾಡಲು ಬಳಕೆ ಮಾಡುವ ಹಿಟ್ಟಿನ ಮೇಲೆ ಟಾಯ್ಲೆಟ್​ ಬ್ರಷ್​​, ನೆಲ ಒರೆಸುವ ಬಟ್ಟೆಗಳನ್ನು ಇಡಲಾಗಿದೆ. ಪಿಜ್ಜಾ ಹಿಟ್ಟಿನ ಮೇಲೆ ಪೊರಕೆಗಳು, ಟಾಯ್ಲೆಟ್​ ಬ್ರಷ್​ಗಳನ್ನು ಕಂಡ ನೆಟ್ಟಿಗರು ಡಾಮಿನೋಸ್​ ಮೇಲೆ ಕೆಂಡ ಕಾರ್ತಿದ್ದಾರೆ.

ಈ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿರುವ ತುಷಾರ್​, ಅಂಗಡಿಯಲ್ಲಿನ ತಿನಿಸುಗಳನ್ನು ತಿನ್ನೋದಕ್ಕಿಂತ ಮನೆಯಲ್ಲಿನ ಆಹಾರವನ್ನೇ ಸೇವಿಸಿ ಎಂದು ಮನವಿ ಮಾಡಿದ್ದಾರೆ. ಈ ಫೋಟೋಗಳು ಪಿಜ್ಜಾ ಪ್ರಿಯರ ಕಣ್ಣುಗಳನ್ನು ಕೆಂಪಗಾಗಿಸಿದೆ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಡಾಮಿನೋಸ್​ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಯನ್ನು ಎದುರಿಸುತ್ತಿರುವ ಡಾಮಿನೋಸ್​ ಈ ಸಂಬಂಧ ಪ್ರತಿಕ್ರಿಯೆನ್ನು ನೀಡಿದ್ದು ನೈರ್ಮಲ್ಯ ಹಾಗೂ ಆಹಾರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದೆ. ನಾವು ಅತ್ಯುನ್ನತ ಗುಣಮಟ್ಟದ ಆಹಾರವನ್ನು ನೀಡುವ ಬಗ್ಗೆ ವಿಶ್ವಾದ್ಯಂತ ಕಟ್ಟು ನಿಟ್ಟಿನ ಭದ್ರತೆಯನ್ನು ಹೊಂದಿದೆ. ಈ ಫೋಟೋದಲ್ಲಿ ನಮ್ಮ ಸಂಸ್ಥೆಯ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ತೋರಲಾಗುತ್ತದೆ. ಈ ಘಟನೆ ನಮ್ಮ ಗಮನಕ್ಕೆ ಬಂದಿದ್ದು ಕೂಡಲೇ ಈ ಸಂಬಂಧ ತನಿಖೆ ನಡೆಯಲಿದೆ ಎಂದು ಹೇಳಿದೆ .

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...