alex Certify ಡಯಾಬಿಟಿಸ್ ನವರು ಮನೆಯಲ್ಲಿಯೇ ರಕ್ತ ಪರೀಕ್ಷೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಯಾಬಿಟಿಸ್ ನವರು ಮನೆಯಲ್ಲಿಯೇ ರಕ್ತ ಪರೀಕ್ಷೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರ ರಕ್ತದಲ್ಲಿ ಸಕ್ಕರೆ ಮಟ್ಟವು ಏರುಪೇರಾಗುತ್ತಿರುತ್ತದೆ.

ಆದ ಕಾರಣ ಅದನ್ನು ಪ್ರತಿದಿನ ಪರೀಕ್ಷಿಸುತ್ತಿರಬೇಕು. ಹಾಗಾಗಿ ಕೆಲವರು ಈ ಪರೀಕ್ಷೆಯನ್ನು ಸಾಧನಗಳನ್ನು ಬಳಸಿ ಮನೆಯಲ್ಲಿಯೇ ಪರೀಕ್ಷಿಸುತ್ತಾರೆ. ಈ ರೀತಿ ಮನೆಯಲ್ಲಿಯೇ ಪರೀಕ್ಷೆ ಮಾಡುವವರು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

*ರಕ್ತ ಪರೀಕ್ಷೆ ಮಾಡುವಾಗ ಊಟವಾದ ಮೇಲೆ ಕನಿಷ್ಠ 2 ಗಂಟೆಗಳ ಕಾಲ ಕಾಯಬೇಕು. ಊಟವಾದ ತಕ್ಷಣ ಪರೀಕ್ಷಿಸಿದರೆ ಫಲಿತಾಂಶ ಸರಿಯಾಗಿ ಸಿಗುವುದಿಲ್ಲ.

* ಕೆಲವರು ರಕ್ತ ಪರೀಕ್ಷೆ ಮಾಡುವಾಗ ಒಂದೇ ಬೆರಳನ್ನು ಬಳಸುತ್ತಾರೆ. ಇದರಿಂದ ಬೆರಳುಗಳು ಗಾಯವಾಗಿ ವಾಸಿಯಾಗಲು ತುಂಬಾ ಸಮಯ ಬೇಕಾಗಬಹುದು.

*ರಕ್ತ ಪರೀಕ್ಷೆಗೆ ಬಳಸುವ ಸಾಧನಗಳನ್ನು ಮರು ಬಳಕೆ ಮಾಡಿದರೆ ಅದು ಫಲಿತಾಂಶವನ್ನು ತಪ್ಪಾಗಿ ನೀಡುವ ಸಾಧ್ಯತೆ ಇದೆ. ಹಾಗೂ ಅವಧಿ ಮುಗಿದ ಕಳಪೆ ಸಾಧನವನ್ನು ಬಳಸಬೇಡಿ.

*ಪರೀಕ್ಷೆಗೆ ಒಳಪಡುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ವಾಶ್ ಮಾಡಿ. ಯಾಕೆಂದರೆ ತೊಳೆಯದ ಕೈಗಳಿಂದ ಪರೀಕ್ಷೆಗೆ ಒಳಪಟ್ಟರೆ ಸಕ್ಕರೆ ಮಟ್ಟದಲ್ಲಿ ಶೇ.10ರಷ್ಟು ವ್ಯತ್ಯಾಸ ಕಂಡು ಬರುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

*ನಿಮ್ಮ ರಕ್ತ ಪರೀಕ್ಷೆಯ ಸಾಧನದಲ್ಲಿ ಸಕ್ಕರೆ ಮಟ್ಟ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಗೊತ್ತಿಲ್ಲವಾದರೆ ವೈದ್ಯರನ್ನು ಸಂಪರ್ಕಿಸಿ ತಿಳಿಯಿರಿ. ಇಲ್ಲವಾದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

*ಸರಿಯಾಗಿ ನೀರು ಸೇವನೆ ಮಾಡಿ. ಇಲ್ಲವಾದರೆ ನಿರ್ಜಲೀಕರಣದಿಂದ ಸಕ್ಕರೆ ಮಟ್ಟ ಹೆಚ್ಚಾಗಿ ಕಾಣಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...