ಡಯಾಬಿಟಿಕ್ ರೆಟಿನೋಪತಿ ಸಮಸ್ಯೆ ಹೊಂದಿರುವ ಮಧುಮೇಹಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇವರಿಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಗ್ರೀನ್ ಲೇಸರ್’ ಚಿಕಿತ್ಸೆ ಪರಿಚಯಿಸಲಾಗಿದ್ದು, ಇದನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ವಿಷಯ ತಿಳಿಸಿದ್ದು, ರೆಟಿನೋಪತಿ ಸಮಸ್ಯೆಯಿಂದ ಕಣ್ಣಿನ ದೃಷ್ಟಿಗೆ ಕ್ರಮೇಣ ಹಾನಿಯಾಗುವ ಸಂಭವವಿರುತ್ತದೆ. ಹೀಗಾಗಿ ಇದನ್ನು ಪತ್ತೆ ಹಚ್ಚಿ ಅಗತ್ಯ ಕಂಡುಬಂದಲ್ಲಿ ಗ್ರೀನ್ ಲೇಸರ್ ಚಿಕಿತ್ಸೆ ಮೂಲಕ ಪರಿಹರಿಸಬಹುದಾಗಿದೆ ಎಂದು ಹೇಳಿದರು.
ಡಯಾಬಿಟಿಕ್ ರೆಟಿನೋಪತಿ ಸಮಸ್ಯೆ ಹೊಂದಿರುವವರಿಗೆ ಎಷ್ಟು ಬೆಳಕಿದ್ದರೂ ಸಹ ಕಾಣುವುದಿಲ್ಲ, ಅಂತವರು ಗ್ರೀನ್ ಲೇಸರ್ ಚಿಕಿತ್ಸೆಗೆ ಒಳಗಾದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದ ಅವರು, ಹೀಗಾಗಿ ಇದನ್ನು ಈಗ ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.