ಎಷ್ಟೇ ಡಯಟ್ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎನ್ನುತ್ತೀರಾ. ನಿಮ್ಮ ವ್ಯಾಯಾಮವೂ ಪ್ರಯೋಜನ ಕೊಡುತ್ತಿಲ್ಲಾ ಎಂದು ಬೇಸರಿಸುತ್ತೀರಾ. ಹಾಗಿದ್ದರೆ ಇಲ್ಲಿ ಕೇಳಿ.
ವ್ಯಾಯಾಮ ಮಾಡಲೆಂದು ವಿಪರೀತ ನಿದ್ದೆ ಕೆಟ್ಟರೆ ಪ್ರಯೋಜನವಿಲ್ಲ. ದಿನಕ್ಕೆ ಆರರಿಂದ ಏಳು ಗಂಟೆ ನಿದ್ದೆ ಅಗತ್ಯವಾಗಿ ಬೇಕೇ ಬೇಕು. ಅದಕ್ಕಿಂತ ಕಡಿಮೆ ನಿದ್ದೆ ಮಾಡಿ ವ್ಯಾಯಾಮ ಮಾಡಿದರೆ ನಿಮ್ಮ ದೇಹ ತೂಕ ಕಡಿಮೆಯಾಗುವುದಿಲ್ಲ.
ಕೆಲಸದ ಅಥವಾ ವೈಯಕ್ತಿಕ ಕಾರಣದಿಂದ ನೀವು ಒತ್ತಡಕ್ಕೆ ಒಳಗಾಗಿ ವ್ಯಾಯಾಮ ಮಾಡಿದರೂ ದೇಹ ಹಾಗೂ ಹೊಟ್ಟೆಯ ಭಾಗ ಕರಗುವುದೇ ಇಲ್ಲ. ಇದರಿಂದ ಕೊಬ್ಬು ಮತ್ತಷ್ಟು ಹೆಚ್ಚುತ್ತದೆ.
ಮದ್ಯಪಾನ, ಧೂಮಪಾನ ಮಾಡುತ್ತಿದ್ದರೆ ನೀವು ದೇಹದ ತೂಕ ಇಳಿಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾಗಿಯೇ ಇಲ್ಲ. ದುಶ್ಚಟಗಳಿದ್ದವರು ವ್ಯಾಯಾಮ ಅಥವಾ ಡಯಟ್ ಮಾಡುವುದರಿಂದ ಯಾವುದೇ ಪ್ರಯೋಜನ ದೊರೆಯದು.
ಡಯಟ್ ಎಂಬ ಕಾರಣಕ್ಕೆ ಏನೂ ತಿನ್ನದೆ ಇರಬಾರದು. ಅದು ಗ್ಯಾಸ್ಟ್ರಿಕ್ ನಂಥ ಸಮಸ್ಯೆಯನ್ನು ಹುಟ್ಟು ಹಾಕೀತು. ಪೋಷಕಾಂಶ ಭರಿತ ಆಹಾರವನ್ನು ಸೇವಿಸಿಯೇ ವ್ಯಾಯಾಮ ಮಾಡಬೇಕು.