alex Certify ಠಾಣೆ ಮೆಟ್ಟಿಲೇರಿದ 70 ವರ್ಷದ ದಂಪತಿ ಕಲಹ; ಪೊಲೀಸರ ಮಧ್ಯ ಪ್ರವೇಶದಿಂದ ಪರಸ್ಪರ ಸಿಹಿ ತಿನ್ನಿಸಿ ನಸುನಕ್ಕ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆ ಮೆಟ್ಟಿಲೇರಿದ 70 ವರ್ಷದ ದಂಪತಿ ಕಲಹ; ಪೊಲೀಸರ ಮಧ್ಯ ಪ್ರವೇಶದಿಂದ ಪರಸ್ಪರ ಸಿಹಿ ತಿನ್ನಿಸಿ ನಸುನಕ್ಕ ಜೋಡಿ

70 ವರ್ಷದ ದಂಪತಿಗಳ ಜಗಳ ಮಿತಿ ಮೀರಿದ್ದು, ಅಂತಿಮವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂತಿಮವಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಸುಖಾಂತ್ಯಗೊಂಡಿದೆ.

ಇಷ್ಟು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರೂ ಇತ್ತೀಚೆಗೆ ಇವರಿಬ್ಬರ ನಡುವಣದ ಜಗಳ ಮಿತಿ ಮೀರಿದೆ. ಕಡೆಗೊಂದು ದಿನ ಪೊಲೀಸರಿಗೆ ದೂರು ನೀಡುವವರೆಗೂ ತಲುಪಿದೆ.

ಈ ಸಂದರ್ಭದಲ್ಲಿ ಠಾಣಾಧಿಕಾರಿ ದಂಪತಿಗೆ ತಿಳಿ ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿರುವ ನೀವುಗಳು ವೃದ್ದಾಪ್ಯದಲ್ಲಿ ಯಾಕೆ ಕೋರ್ಟ್‌, ಕಛೇರಿ ಅಲೆಯುತ್ತೀರಿ ಎಂದು ಬುದ್ದಿವಾದ ಹೇಳಿದ್ದಾರೆ.

ಕಡೆಗೂ ದಂಪತಿಗಳು ಠಾಣಾಧಿಕಾರಿ ಮಾತಿಗೆ ಸಮ್ಮತಿಸಿದ್ದು, ಆಗ ಪೊಲೀಸರು ಠಾಣೆಗೆ ಸಿಹಿ ತಿಂಡಿ ತರಿಸಿದ್ದಾರೆ. ಈ ವೇಳೆ ಪತ್ನಿ ನಾಚಿಕೊಳ್ಳುತ್ತಲೇ ಪತಿಗೆ ಸಿಹಿ ತಿನಿಸಿದರೆ ಪತಿ ಸಹ ತನ್ನ ಪತ್ನಿಗೆ ಸಿಹಿ ತಿನ್ನಿಸಿ ನಗೆ ಚಟಾಕಿ ಹಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...