ನವದೆಹಲಿ: ಇನ್ಮುಂದೆ ಟ್ವಿಟ್ಟರ್ ನಲ್ಲಿ ಬ್ಲೂ ಟಿಕ್ ಬರೋದಿಕ್ಕೆ ಹಣ ಪಾವತಿ ಮಾಡಬೇಕು ಎಂಬ ಹೊಸ ರೂಲ್ಸ್ ಅನ್ನ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಹೇಳಿದ್ದರು. ಇವರ ಈ ನಿರ್ಧಾರಕ್ಕೆ ಒಂದಿಷ್ಟು ಜನ ವಿರೋಧ ಮಾಡಿದರೆ ಮತ್ತೊಂದಿಷ್ಟು ಜನ ಸ್ವಾಗತ ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾರೂ ಇದಕ್ಕೆ ಹಣ ಪಾವತಿ ಮಾಡಿರಲಿಲ್ಲ.
ಇದೀಗ ಬ್ಲೂ ಟಿಕ್ ಗೆ ಹಣ ಪಾವತಿ ಮಾಡುವ ಮೂಲಕ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ ನೈನಾ ರೆಧು. ಇವರು ಹಣ ಪಾವತಿಸಿ ಪರಿಶೀಲಿಸಿದ ಖಾತೆಯನ್ನು ಅಂದರೆ ಬ್ಲೂ ಟಿಕ್ ಖಾತೆ ಪಡೆದ ಮೊದಲ ಭಾರತೀಯರಾಗಿದ್ದಾರೆ. ಖಾತೆ ಪಡೆಯಲು ತಿಂಗಳಿಗೆ 8 ಡಾಲರ್ ಅಂದರೆ 655 ರೂಪಾಯಿ ಶುಲ್ಕ ಪಾವತಿಸಿದ್ದಾರೆ.
ಇನ್ನು ಮುಂಬೈ ಜೈಸಲ್ಮೇರ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ನೈನಾ 2006 ರಲ್ಲಿ ಟ್ವಿಟ್ಟರ್ ಖಾತೆ ತೆರೆದರು. ಇಲ್ಲಿಯವರೆಗೆ ಸುಮಾರು 1.75 ಲಕ್ಷ ಟ್ವೀಟ್ ಮಾಡಿದ್ದಾರೆ.
ಇನ್ನು ಈ ಬ್ಲೂ ಟಿಕ್ ಗೆ ಹಣ ನಿಗದಿಪಡಿಸುವ ಕುರಿತು ಮಾತನಾಡಿರುವ ಅವರು, ಇದಕ್ಕೆ ಹಣವನ್ನು ಯಾವುದಕ್ಕೆ ವಿಧಿಸಲಾಗುತ್ತಿದೆ ಎನ್ನುವ ಬಗ್ಗೆ ಗೊತ್ತಿರಲಿಲ್ಲ. ಆದರೆ ನಂತರ ಅದರ ಬಗ್ಗೆ ಗೊತ್ತಾಯ್ತು. ಟ್ವಿಟ್ಟರ್ ಬಳಕೆದಾರರ ನಿಜವಾದ ಖಾತೆ ಎನ್ನುವುದಕ್ಕೆ ಇಂದೊಂದು ಅಸ್ತ್ರ. ಇದನ್ನು ಪರಿಶೀಲನೆಗಾಗಿಯೇ ಈ ಕ್ರಮ ಜಾರಿಗೆ ತರಲಾಗಿದೆ. ಬದಲಾದ ಈ ನಿಯಮದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಂತ ಇದು ಅನಿವಾರ್ಯ ಅಂತಲೂ ಅಲ್ಲ. ಬೇಕಾದವರು ಪಡೆಯಬಹುದು ಎಂದು ಹೇಳಿದ್ದಾರೆ.