alex Certify ಟ್ವಿಟ್ಟರ್‌ ಹೊಸ ಮಾಲೀಕ ಎಲೊನ್‌ ಮಸ್ಕ್‌ರ ಕಲರ್‌ಫುಲ್‌ ಬದುಕು; ಮೂರು ಮದುವೆ, ನಟಿಯರೊಂದಿಗೆ ಡೇಟಿಂಗ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟ್ಟರ್‌ ಹೊಸ ಮಾಲೀಕ ಎಲೊನ್‌ ಮಸ್ಕ್‌ರ ಕಲರ್‌ಫುಲ್‌ ಬದುಕು; ಮೂರು ಮದುವೆ, ನಟಿಯರೊಂದಿಗೆ ಡೇಟಿಂಗ್‌…!

ಟ್ವಿಟ್ಟರ್‌ನ ಹೊಸ ಮಾಲೀಕ, ಬಿಲಿಯನೇರ್‌ ಎಲೊನ್‌ ಮಸ್ಕ್‌ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಕೇವಲ ವ್ಯಾವಹಾರಿಕವಾಗಿ ಮಾತ್ರವಲ್ಲ, ಎಲೊನ್‌ರ ವೈಯಕ್ತಿಕ ಬದುಕು ಕೂಡ ಸಾಕಷ್ಟು ಚರ್ಚೆಯಾಗುತ್ತಲೇ ಇರುತ್ತದೆ. ಯಾಕಂದ್ರೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯದ್ದು ರಂಗೀನ್‌ ಬದುಕು.

ಎಲೊನ್‌ ಮಸ್ಕ್ ಒಟ್ಟು ಐವರು ಯುವತಿಯರೊಂದಿಗೆ ಸಂಬಂಧ ಹೊಂದಿದ್ದರು. ಈತ ಈಗಾಗಲೇ ಮೂರು ಬಾರಿ ವಿವಾಹವಾಗಿದ್ದಾರೆ. ಆದರೆ ವೈವಾಹಿಕ ಜೀವನ ಯಶಸ್ವಿಯಾಗಲಿಲ್ಲ. ಎಲೊನ್‌ ಮಸ್ಕ್‌ರ ಮೊದಲ ಪತ್ನಿ ಜಸ್ಟಿನ್ ವಿಲ್ಸನ್. 7 ವರ್ಷಗಳ ಕಾಲ ಡೇಟಿಂಗ್‌ ಮಾಡಿದ್ದ ಈ ಜೋಡಿ 2000ನೇ ಇಸ್ವಿಯಲ್ಲಿ ಮದುವೆಯಾದರು, ಇಬ್ಬರಿಗೂ ಕಾಲೇಜಿನಿಂದ್ಲೇ ಪರಿಚಯವಿತ್ತು. ಆದರೆ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 8 ವರ್ಷಗಳ ನಂತರ 2008ರಲ್ಲಿ ಎಲೊನ್‌ ಮಸ್ಕ್‌ ಹಾಗೂ ಜಸ್ಟಿನ್‌ ವಿಲ್ಸನ್‌ ವಿಚ್ಛೇದನ ಪಡೆದಿದ್ದಾರೆ. ಇವರಿಗೆ ಐವರು ಮಕ್ಕಳಿದ್ದಾರೆ.

ಜಸ್ಟಿನ್‌ ಜೊತೆಗಿನ ಡಿವೋರ್ಸ್‌ ಬಳಿಕ ಎಲೊನ್‌ ಮಸ್ಕ್‌, ನಟಿ ತಲಲಾ ರಿಲೇ ಅವರನ್ನು ಎರಡು ಬಾರಿ ವಿವಾಹವಾದರು. ಅಮೆರಿಕದ ಈ ನಟಿ ಸಾಕಷ್ಟು ಸಿನೆಮಾ ಹಾಗೂ ಟಿವಿ ಸಿರೀಸ್‌ಗಳಲ್ಲಿ ನಟಿಸಿದ್ದಾಳೆ. 2010 ರಲ್ಲಿ ಇವರ ಮದುವೆ ನೆರವೇರಿತ್ತು. ಆದರೆ ಎಲೊನ್‌ ಮಸ್ಕ್‌ ಹಾಗೂ ರಿಲೇ 2012ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಮತ್ತೆ 2013ರಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಎರಡನೇ ಚಾನ್ಸ್‌ ಪಡೆದರೂ ಇವರ ದಾಂಪತ್ಯ ಯಶಸ್ವಿಯಾಗಲೇ ಇಲ್ಲ. 2016 ರಲ್ಲಿ ದಂಪತಿ ಮತ್ತೆ ಬೇರ್ಪಟ್ಟರು.

ಇದರ ಬೆನ್ನಲ್ಲೇ ಎಲೊನ್‌ ಮಸ್ಕ್‌ ಹಾಗೂ ಅಂಬರ್ ಹರ್ಡ್ ಡೇಟಿಂಗ್‌ ಶುರು ಮಾಡಿದ್ದರು. ಆದರೆ 2017 ರಲ್ಲಿ ಇಬ್ಬರೂ ದೂರವಾಗಿದ್ದಾರೆ. ನಂತರ ಎಲೊನ್‌ ಬದುಕಿನಲ್ಲಿ ಸಾಕಷ್ಟು ಯುವತಿಯರು ಬಂದು ಹೋಗಿದ್ದಾರೆ. ಆದ್ರೆ ಆತ ಯಾರನ್ನೂ ಮದುವೆಯಾಗಲಿಲ್ಲ. 2018 ರಲ್ಲಿ ಎಲೊನ್‌ ಮಸ್ಕ್‌, ಸಂಗೀತಗಾರ್ತಿ ಗ್ರಿಮ್ಸ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಗ್ರಿಮ್ಸ್ ಗರ್ಭಿಣಿಯಾದಳು, ಮದುವೆಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನ  X A-12 ಎಂಬ ಹೆಸರು ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ನಂತರ ಅವರು ಕ್ಯಾಲಿಫೋರ್ನಿಯಾ ಕಾನೂನನ್ನು ಅನುಸರಿಸಲು X AE A-XII ಎಂದು ಹೆಸರನ್ನು ಬದಲಾಯಿಸಿದರು.

ಸೆಪ್ಟೆಂಬರ್ 2021 ರಲ್ಲಿ ಇಬ್ಬರೂ ಬೇರ್ಪಟ್ಟರು.ಆದರೆ ಅದೇ ವರ್ಷ ಡಿಸೆಂಬರ್‌ನಲ್ಲಿ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾರಂತೆ. ಎಲೊನ್‌ ಮಸ್ಕ್‌, ಶಿವೋನ್ ಜಿಲ್ಲಿಸ್ ಜೊತೆಗೂ ಸಂಬಂಧ ಹೊಂದಿದ್ದರು. ಇಬ್ಬರು ಮಕ್ಕಳನ್ನು ಸಹ ಇವರು ಹೊಂದಿದ್ದಾರೆ. ಪ್ರಸ್ತುತ ಎಲೊನ್‌ ಮಸ್ಕ್, ಆಸ್ಟ್ರೇಲಿಯಾದ ನಟಿ ನತಾಶಾ ಬ್ಯಾಸೆಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಆಸ್ಟಿನ್ ಬಟ್ಲರ್ ಅವರ ಮುಂಬರುವ ಚಿತ್ರ ಎಲ್ವಿಸ್ ಬಯೋಪಿಕ್ ನಲ್ಲಿ ಬ್ಯಾಸೆಟ್ ಕಾಣಿಸಿಕೊಳ್ಳಲಿದ್ದಾರೆ. ಅಲೆನ್ ಮತ್ತು ಬ್ಯಾಸೆಟ್ ತಮ್ಮ ಸಂಬಂಧವನ್ನು ಇನ್ನೂ ಅಧಿಕೃತಗೊಳಿಸಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...