ಕಮೆಂಗ್: ಬಲು ಅಪರೂಪದ ಸಸ್ತನಿ ಟಕಿನ್ ಜೀವಿಯು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಕಂಡುಬಂದಿದೆ.
ಟಕಿನ್ ಚಿತ್ರವು ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಏಷ್ಯಾದ ಪರ್ವತ ಪರಿಸರಕ್ಕೆ ಟಕಿನ್ ಹೊಂದಿಕೊಳ್ಳುತ್ತದೆ. ಮಿತಿ ಮೀರಿದ ಬೇಟೆ ಮತ್ತು ಅದರ ನೈಸರ್ಗಿಕ ಸಂಪನ್ಮೂಲಗಳ ನಾಶದಿಂದಾಗಿ ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಇದರ ಹೆಸರನ್ನು ಸೇರ್ಪಡೆ ಮಾಡಲಾಗಿದೆ.
ಚಿರತೆ ಸಮೀಕ್ಷೆ ಮಾಡುವುದಕ್ಕಾಗಿ ಅರಣ್ಯದಲ್ಲಿ ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಸೆಪ್ಪಾ ಅರಣ್ಯ ಇಲಾಖೆಯು ಸುಮಾರು 3500 ಮೀ. ಎತ್ತರದಲ್ಲಿ ಕ್ಯಾಮರಾಗಳನ್ನು ಅಳವಡಿಸಿದೆ. ಈ ಕ್ಯಾಮರಾದಲ್ಲಿ ಈಗ ಅಪರೂಪದ ಸಸ್ತನಿಯ ಫೋಟೋ ಸೆರೆಯಾಗಿದೆ.
ಈ ಪ್ರಾಣಿಯು ದೊಡ್ಡ ಸಸ್ತನಿಯಾಗಿದ್ದು, ಕಾಡಿನಲ್ಲಿ ಕಾಣಸಿಗುವುದು ತೀರಾ ವಿರಳ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.