ನಟಿ ಸಂಯುಕ್ತ ಹೆಗಡೆ ಅಭಿಮಾನಿಗಳ ಕಮೆಂಟ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ವಿಶೇಷ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ನಟಿ ಸಂಯುಕ್ತ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರೀಯರಾಗಿರುತ್ತಾರೆ. ಹಲವಾರು ಪೋಸ್ಟ್ ಗಳನ್ನು ಮಾಡುತ್ತ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಈ ಸಂದರ್ಭದಲ್ಲಿ ಅವರು ಹಲವಾರು ಟ್ರೋಲ್ ಗಳಿಗೆ ಒಳಗಾಗಿದ್ದಾರಂತೆ. ಅವರ ದೇಹದ ಬಗ್ಗೆ ಕೂಡ ಹಲವರು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ನಟಿ ವಿಶೇಷ ಪೋಸ್ಟ್ ಹಾಕಿ, ಉತ್ತರ ನೀಡಿದ್ದಾರೆ.
Shocking: 27 ದಿನಗಳ ಹಸುಗೂಸನ್ನು ಬರ್ಬರವಾಗಿ ಕೊಲೆಗೈದ ಹೆತ್ತ ತಾಯಿ..!
ನೀವು, ನನ್ನ ದೇಹ ಪ್ರಕೃತಿಯ ಬಗ್ಗೆ ಗಮನ ಹರಿಸುವುದಕ್ಕೆ, ತೆಳ್ಳಗಿರುವುದು ಅದೃಷ್ಟ ಎಂಬುವುದನ್ನು ನಿರಂತರವಾಗಿ ತಿಳಿಸಿಕೊಟ್ಟಿದ್ದಕ್ಕೆ, 45 ಕೆಜಿ ತೂಕದಿಂದ 50 ಕೆಜಿ ತೂಕಕ್ಕೆ ನಾನು ಹೆಚ್ಚಾಗಲು ಮಾಡಿರುವ ಪ್ರಯತ್ನಗಳಿಗೆ ನೀವು ವಿರೋಧ ವ್ಯಕ್ತಪಡಿಸಿದ್ದಕ್ಕೆ, ತೆಳ್ಳಗಿರುವವರು ಫಿಟ್ ಆಗಿರುವುದು ಲೆಕ್ಕಕ್ಕೆ ಬರಲ್ಲ, ದಪ್ಪ ಇರುವವರು ಫಿಟ್ ಆಗಿರುವುದು ಮಾತ್ರ ಲೆಕ್ಕಕ್ಕೆ ಬರುತ್ತದೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು…..ನಿಮ್ಮ ತೆಳ್ಳನೆಯ ಫ್ರೆಂಡ್ ಎಂದು ಬರೆದುಕೊಂಡಿದ್ದಾರೆ.
ಕೆಲವರು ತೂಕ ಕಳೆದುಕೊಂಡು ತೆಳ್ಳಗಾಗುವುದಕ್ಕೆ ತುಂಬಾ ಪ್ರಯತ್ನ ಪಡುತ್ತಿರುತ್ತಾರೆ. ಹಲವರಂತೂ ಸಾಕಷ್ಟು ಹೋರಾಟಗಳನ್ನೇ ಮಾಡುತ್ತಿರುತ್ತಾರೆ. ಕೆಲವರು ತೂಕ ಹೆಚ್ಚಿಸಿಕೊಳ್ಳುವುದಕ್ಕೆ ತಮ್ಮ ಹೋರಾಟ ನಡೆಸಿರುತ್ತಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಫಿಟ್ ಆಗಿರುವುದೇ ಮುಖ್ಯ. ನೀವು ಹುಟ್ಟಿದ್ದಕ್ಕೆ ದೇಹ ಪೋಷಿಸಿ, ತರಬೇತಿ ನೀಡುವುದು ಮುಖ್ಯ ಎಂದು ಈ ಮೂಲಕ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.