ಇದೇ ಶುಕ್ರವಾರದಂದು ನಟ ಅಕ್ಷಯ್ ಕುಮಾರ್ ಹಾಗೂ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಟನೆಯ ʼಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ʼ ಬಿಡುಗಡೆಯಾಗಲಿದೆ. ಇದು ಭಾರತೀಯ ಮಧ್ಯಕಾಲೀನ ರಾಜ ಪೃಥ್ವಿರಾಜ್ ಚೌಹಾಣ್ ಜೀವನಾಧಾರಿತ ಐತಿಹಾಸಿಕ ಸಿನೆಮಾ. ಸಿನೆಮಾ ಪ್ರಚಾರಕ್ಕಾಗಿ ದೇಶದ ನಾನಾ ಮೂಲೆಯಲ್ಲಿ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಳ್ತಾ ಇದೆ.
’ಸಾಮ್ರಾಟ್ ಪೃಥ್ವಿರಾಜ್’ ಸಿನೆಮಾ ಮುಖ್ಯ ಪಾತ್ರಧಾರಿಯಾಗಿರೋ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ‘ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಮೊಘಲ್ ದಾಳಿಕೋರರ ಮಾಹಿತಿಗಳು ಅಗತ್ಯಕ್ಕಿಂತ ಹೆಚ್ಚು ಇದೆ. ಆದರೆ ಪೃಥ್ವಿರಾಜ್ ಚೌಹಾಣ್ ಮತ್ತು ಮಹಾರಾಣಾ ಪ್ರತಾಪ್ ಅವರಂತಹ ಧೀರ-ಶೂರ ರಾಜರ ವೈಭವದ ಮಾಹಿತಿಗಳು ತುಂಬಾ ಕಡಿಮೆ ಕೊಡಲಾಗಿದೆ.’ ಅಂತ ಹೇಳಿದ್ದಾರೆ.
ಅಕ್ಷಯ್ ಕೊಟ್ಟ ಹೇಳಿಕೆ ಈಗ ಟ್ರೋಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಹೇಳಿದ್ದ ಮಾತನ್ನ ಕೆಲವರು ಗಂಭೀರವಾಗಿ ತೆಗೆದುಕೊಂಡರೆ ಇನ್ನು ಕೆಲವರು ಇದನ್ನ ತಮಾಷೆ ಮಾಡುತ್ತಿದ್ದಾರೆ. ಓರ್ವ ಸೋಶಿಯಲ್ ಮೀಡಿಯಾ ಯೂಸರ್ ಅಂತೂ ‘ನಿಮಗೆ ಮಾಹಿತಿ ಇಲ್ಲದಿದ್ದರೆ NCERT ಪಠ್ಯ ಪುಸ್ತಕವನ್ನ ಒಮ್ಮೆ ಓದಿʼ ಅಂತ ಸಲಹೆಯನ್ನು ಕೊಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಇಂಟರ್ವ್ಯೂವ್‌ನಲ್ಲಿ ಮಾತನಾಡಿದ ಅಕ್ಷಯ್ ಕುಮಾರ್ ದುರದೃಷ್ಟವಶಾತ್ ನಮ್ಮ ಇತಿಹಾಸದ ಪುಟಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಸೇರಿದಂತೆ ಅನೇಕ ಮಹಾನ್ ರಾಜರ ಉಲ್ಲೇಖವನ್ನ 2-3 ಸಾಲುಗಳಲ್ಲಿ ಮಾತ್ರ ನೋಡಬಹುದಾಗಿದೆ. ನಮ್ಮ ರಾಜರು ಕೂಡಾ ವೀರರು, ಆದರೆ ಇತಿಹಾಸದ ಪುಟ ತಿರುವಿ ಹಾಕಿ ನೋಡಿದ್ರೆ ಸಾಕು, ಅಲ್ಲಿ ಮೊಗಲರ ಬಗ್ಗೆ ಸವಿಸ್ತಾರವಾಗಿ ಬರೆದಿರೋದನ್ನ ಕಾಣಬಹುದಾಗಿದೆ. ಆದ್ದರಿಂದ ನಮ್ಮ ಇತಿಹಾಸದ ಪುಸ್ತಕಗಳನ್ನ ಮತ್ತೊಮ್ಮೆ ಕೂಲಂಕುಶವಾಗಿ ಪರಿಶೀಲಿಸಬೇಕು ಅಂತ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡಿದರು.
ನಮ್ಮ ದೇಶದ ರಾಜರ ವೀರಗಾಥೆಗಳು ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು , ಅದು ಅವರಿಗೆ ಮಾದರಿಯಾಗಬಲ್ಲದು. ಅಷ್ಟೆ ಅಲ್ಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ತಿದೆ. ನಮ್ಮ ದೇಶ ಬದಲಾಗುತ್ತಿದೆ ಅಂತ ಕೂಡಾ ಸಂದರ್ಶನದಲ್ಲಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಕುಮಾರ್ ವಿಡಿಯೋ ವೈರಲ್ ಆಗಿದೆ ಈ ವಿಡಿಯೋ ನೋಡಿದ ಮಹಮ್ಮದ್ ಜುಬೇರ್ ಅನ್ನೊ ವ್ಯಕ್ತಿ, ಈ ವಿಡಿಯೋ ಶೇರ್ ಮಾಡಿಕೊಂಡು ‘ಕೆನಡಾದ ಪ್ರಜೆಗೆ ಭಾರತದ ಪಠ್ಯ ಪುಸ್ತಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈಗಿನ ಏಳನೇಯ ತರಗತಿಯ ಪುಸ್ತಕದಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಸೇರಿದಂತೆ ಅನೇಕ ರಾಜರ ಬಗ್ಗೆ ಮಾಹಿತಿ ನೀಡಲಾಗಿದೆ. ಚಿತ್ರ ಪ್ರಚಾರದ ನೆಪದಲ್ಲಿ ವಿವಾದವನ್ನ ಸೃಷ್ಟಿಸುತ್ತಿರೋದು ಸರಿಯಲ್ಲ ಅಂತ ಹೇಳಿದ್ದಾರೆ.