ವಿಜಯ್ ಸಂಕೇಶ್ವರ್, ಹೀಗಂದಾಕ್ಷಣ ಎಲ್ಲರಿಗೂ ತಕ್ಷಣವೇ ನೆನಪಾಗೋದು ವಿಆರ್‌ಎಲ್ ಟ್ರಾವೆಲ್ ಗ್ರೂಪ್ ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ ಸಂಸ್ಥೆ ಇದು, ಇದರ ಹಿಂದೆ ಇರೋ ವ್ಯಕ್ತಿಯೇ ವಿಜಯ್ ಸಂಕೇಶ್ವರ್,
ಕೇವಲ ವಿ.ಆರ್.ಎಲ್ ಸಮೂಹದ ಸಂಸ್ಥಾಪಕ ಮಾತ್ರ ಅಲ್ಲ, ಖ್ಯಾತ ಉದ್ಯಮಿ, ರಾಜಕಾರಣಿ ಕೂಡಾ. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಅದರಲ್ಲಿ ಯಶಸ್ಸನ್ನ ಕಂಡುಕೊಂಡಿರುವ ಇವರು ಅನೇಕರಿಗೆ ಮಾದರಿ. ಈಗ ಇವರ ಜೀವನಾಧಾರಿದ ಕಥೆ ‘ವಿಜಯಾನಂದ’ ಅನ್ನೋ ಹೆಸರಿನ ಸಿನೆಮಾ ತೆರೆಗೆ ಬರಲು ಸಜ್ಜಾಗಿದೆ. ಸಿನೆಮಾ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರರಸಿಕರು ಟ್ರೇಲರ್ ನೋಡಿಯೇ ಥ್ರಿಲ್ ಆಗಿದ್ದಾರೆ.
ಇತ್ತೀಚೆಗೆ ವ್ಯಕ್ತಿಗಳ ಜೀವನಾಧಾರಿತ ಸಿನೆಮಾಗಳು ತೆರೆಗೆ ಬರುತ್ತಲೇ ಇದೆ. ಆದರೆ ಈ ಬಾರಿ ವಿಜಯ್ ಸಂಕೇಶ್ವರ್ ಅವರ ಕಥೆ ತೆರೆಗೆ ಬರುತ್ತಿರೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಸ್ಪೂರ್ತಿದಾಯಕವಾದ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇವರ ಜೀವನ ಕತೆ, ಉದ್ಯಮ ಕಟ್ಟಲು ಅವರು ಪಟ್ಟ ಪಾಡು, ಮಾಡಿದ ಹೋರಾಟಗಳು ಈ ಸಿನೆಮಾ ಮೂಲಕ ನೋಡಬಹುದು.
ಕಾಮನ್ ಮ್ಯಾನ್ ಕುಟುಂಬದಲ್ಲಿ ಹುಟ್ಟಿದ್ದ ವಿಜಯ್ ಸಂಕೇಶ್ವರ್ ಇವರು, ಕೇವಲ ಒಂದು ಲಾರಿಯಿಂದ ಆರಂಭಿಸಿ ವಿ.ಆರ್.ಎಲ್ ಎಂಬ ದೊಡ್ಡ ಸಮೂಹವನ್ನು ಕಟ್ಟಿ ಬೆಳೆಸಿದ ಉದ್ಯಮಿಯಾಗಿ ಹೇಗೆ ಬೆಳೆದು ನಿಂತರು. ಅನ್ನೊ ಕಥೆಯೇ ಇಲ್ಲಿ ಸಿನೆಮಾ ರೂಪ ಪಡೆದಿದೆ.
ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಮಾಸ್, ಕಮರ್ಶಿಯಲ್, ಭರ್ಜರಿ ಡೈಲಾಗ್ ಜೊತೆಗೆ ಆ್ಯಕ್ಷನ್ ಈ ಎಲ್ಲ ಅಂಶಗಳು ಕೂಡಾ ಇರಲಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಒಟ್ಟಿನಲ್ಲಿ ಟ್ರೈಲರ್ ಅನ್ನು ಗಮನಿಸಿದಾಗ ಸಿನಿಮಾವನ್ನು, ‘ಪ್ರೊಮೋಷನಲ್ ಟೂಲ್’ ಆಗಿ ಮಾತ್ರವೇ ಪರಿಗಣಿಸದೆ ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆಂಬ ಕುರುಹು ಟ್ರೈಲರ್‌ನಲ್ಲಿ ಕಾಣಿಸುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಹುಟ್ಟು ಹಾಕಿರುವ ಈ ಸಿನೆಮಾ ಶೀಘ್ರದಲ್ಲೆ ಬಿಡುಗಡೆಯಾಗಲಿದ್ದು, ವಿಜಯ್ ಸಂಕೇಶ್ವರ್ ಜೀವನಗಾಥೆ ಎಲ್ಲರ ಮುಂದೆ ರಸವತ್ತಾಗಿ ಇಡಲು ಚಿತ್ರತಂಡ ಪ್ರಯತ್ನಿಸಿದೆ.
ಸಿನಿಮಾದಲ್ಲಿ ನಿಹಾಲ್, ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಬೋಪಣ್ಣ, ವಿಜಯ್ ಸಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ನಾಗ್, ವಿಜಯ್ ಸಂಕೇಶ್ವರ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ ಆರ್‌ಆರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಶೈನ್ ಶೆಟ್ಟಿ, ನಿರ್ದೇಶಕ ದಯಾಳ್ ಪದ್ಮನಾಭ್ ಇನ್ನೂ ಕೆಲವರು ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.