ಇಯರ್ ಎಂಡ್ ಬಂತಂದ್ರೆ ಸಾಕು ಪ್ರತಿಯೊಂದ್ರ ವಾರ್ಷಿಕ ಡೇಟಾ ಹೊರ ಬೀಳತ್ತೆ. ಸೂಪರ್ ಹಿಟ್ ಆದ ಹಾಡುಗಳಿಂದ ಹಿಡಿದು ಹೆಚ್ಚು ಬಳಕೆಯಾದ ಪದಕ್ಕು ರೆಕಗ್ನೈಸೇಷನ್ ಸಿಗೊ ಸಮಯವೇ ವರ್ಷಾಂತ್ಯ. ಇದ್ರಲ್ಲಿ ಆಹಾರ ಪದಾರ್ಥಗಳು ಹಿಂದೆ ಬೀಳೊಕೆ ಸಾಧ್ಯವೇ ಇಲ್ಲ.
ಖಾಸಗಿ ಫುಡ್ ಡೆಲಿವರಿ ಆ್ಯಪ್, ಇಂಥದ್ದೆ ಲಿಸ್ಟ್ ಒಂದನ್ನ ಬಿಡುಗಡೆ ಮಾಡಿದೆ. ಈ ವರ್ಷ ನಿಮ್ಮ ಸಿಟಿ ತಿಂದದ್ದೇನು ಎಂಬ ಇಂಟ್ರಸ್ಟಿಂಗ್ ಲಿಸ್ಟ್ ಬಿಡುಗಡೆಗೊಳಿಸಿರುವ ಖಾಸಗಿ ಕಂಪನಿ, ದೇಶದ ಹತ್ತು ಪ್ರಮುಖ ಸಿಟಿಗಳಲ್ಲಿ ಜನರು ಆರ್ಡರ್ ಮಾಡಿರುವ ಟಾಪ್ ಐದು ಆಹಾರ ಪದಾರ್ಥಗಳ ಪಟ್ಟಿ ನೀಡಿದೆ. ಇದ್ರಲ್ಲಿ ದಕ್ಷಿಣ ಭಾರತೀಯರ ಫೇವರೆಟ್ ಮಸಾಲ ದೋಸೆ ಭಾಗಶಃ ಎಲ್ಲಾ ಸಿಟಿಗಳ ಲಿಸ್ಟ್ ನಲ್ಲಿದೆ. ಬೆಂಗಳೂರಿನಲ್ಲಿ ಟಾಪ್ ಆಗಿರುವ ಫ್ಲೇವರ್ ಫುಲ್ ಮಸಾಲ ದೋಸೆ, ಡೆಲ್ಲಿ, ಗುರುಗ್ರಾಮ, ಲಕ್ನೋ, ಹೈದರಬಾದ್, ಮುಂಬೈ, ಕೊಲ್ಕತ್ತಾ ಸಿಟಿ ಮಂದಿಯ ಮನಸ್ಸಲ್ಲು ಸ್ಥಾನ ಗಳಿಸಿದೆ.
SHOCKING: ಹೊಲದಲ್ಲೇ ಅತ್ಯಾಚಾರ ಎಸಗಲು ವಿಫಲವಾಗಿ ಮಹಿಳೆ ಕತ್ತು ಸೀಳಿದ ಪಾಪಿ
ಆರೋಗ್ಯಕರ ಆಹಾರ ಸೇವನೆಯಲ್ಲಿ ನಂ 1 ಸ್ಥಾನದಲ್ಲಿ ರಾಜಧಾನಿ ಬೆಂಗಳೂರಿದ್ದು, ಹೈದರಾಬಾದ್ ಎರಡನೇ ಹಾಗೂ ಮುಂಬೈ ಮೂರನೇ ಸ್ಥಾನದಲ್ಲಿದೆ. ಆದ್ರೆ ಇವೆಲ್ಲದಕ್ಕಿಂತ ನೆಟ್ಟಿಗರ ಮನಸ್ಸನ್ನ ಗೆದ್ದಿದ್ದು ಮಸಾಲ ದೋಸೆಯ ಪಾಪ್ಯುಲಾರಿಟಿ. ಉತ್ತರ ಭಾರತೀಯರಿಗು ಅಚ್ಚುಮೆಚ್ಚಾಗಿರುವ ಮಸಾಲ ದೋಸೆಯನ್ನ ಆಹಾರಗಳ ರಾಜ ಎಂದು ಮಸಾಲ ದೋಸೆ ಪ್ರಿಯರು ಹಾಡಿ ಹೊಗಳಿದ್ದಾರೆ. ಸಧ್ಯ ಈ ಲಿಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.