
ಅಧಿಕಾರಿ ಹಂಚಿಕೊಂಡಿರುವ ಆರು ಸೆಕೆಂಡ್‌ಗಳ ವಿಡಿಯೋದಲ್ಲಿ ಇಬ್ಬರು ಸ್ನೇಹಿತರು ಟ್ರಾಫಿಕ್ ಸಿಗ್ನಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವುದನ್ನು ಕಾಣಬಹುದು. ಒಬ್ಬ ಫೋಟೋ ಕ್ಲಿಕ್ಕಿಸಲು ರಸ್ತೆಯಲ್ಲಿ ನಿಂತಿದ್ದರೆ, ಮತ್ತೊಬ್ಬ ಟ್ರಾಫಿಕ್ ಪೊಲೀಸ್ ಬೂತ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾನೆ. ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದಾಗ ಸ್ನೇಹಿತರಿಬ್ಬರು ಯಾವುದನ್ನೂ ಲೆಕ್ಕಿಸದೆ ಫೋಟೋ ಕ್ಲಿಕ್ಕಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೆಂಡಕಾರಿದ್ದಾರೆ. ಇವರೆಲ್ಲಾ ಎಲ್ಲೆಲ್ಲಿಂದ ಬರುತ್ತಾರೋ..? ಅಂತೆಲ್ಲಾ ಬಳಕೆದಾರರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.