alex Certify ಟ್ರಕ್ಕಿಂಗ್ ಪ್ರಿಯರಿಗೆ ಕೈಬೀಸಿ ಕರೆವ ಸ್ಪಾಟ್ ‘ಮುಳ್ಳಯ್ಯನಗಿರಿ’ ಬೆಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್ಕಿಂಗ್ ಪ್ರಿಯರಿಗೆ ಕೈಬೀಸಿ ಕರೆವ ಸ್ಪಾಟ್ ‘ಮುಳ್ಳಯ್ಯನಗಿರಿ’ ಬೆಟ್ಟ

ಕಣ್ಣು ಹಾಯಿಸಿದಷ್ಟು ದೂರ ಹಸಿರು, ಬೆಟ್ಟ ಗುಡ್ಡಗಳು, ತಣ್ಣನೆ ಬೀಸುವ ಗಾಳಿ ಜೊತೆಗೆ ಮಂಜಿನ ಮುಸುಕು. ಹೌದು…..ಇದು ಕಾಫಿ ನಾಡು ಚಿಕ್ಕಮಗಳೂರಿನಲ್ಲಿರುವ ಮುಳ್ಳಯ್ಯನಗಿರಿ ಬೆಟ್ಟ.

ಚಿಕ್ಕಮಗಳೂರಿನಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟ ಸಮುದ್ರ ಮಟ್ಟದಿಂದ 1950 ಮೀಟರ್ ಎತ್ತರದಲ್ಲಿದೆ. ಈ ಬೆಟ್ಟದ ಮೇಲ್ಭಾಗದಲ್ಲಿ ಮುಳ್ಳಯ್ಯ ಸ್ವಾಮಿಯ ದೇವಾಲಯವಿದೆ.

ಶಾಂತ ಪರಿಸರ, ಪ್ರಕೃತಿ ಸೌಂದರ್ಯ ಇವೆಲ್ಲವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇನ್ನು ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಿಗುವ ಮಜವೇ ಬೇರೆ. ಚಾರಣಿಗರು ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳವರೆಗೆ ಇಲ್ಲಿ ಭೇಟಿ ನೀಡುವುದು ಸೂಕ್ತ ಸಮಯ.

ಮುಳ್ಳಯ್ಯನಗಿರಿ ತಲುಪುವ ಮೊದಲು ಸೀತಾಳಯ್ಯನ ಗಿರಿ ಸಿಗುತ್ತದೆ. ಈ ಸ್ಥಳದಲ್ಲಿ ಸೀತಾಳಯ್ಯ ತಪಸ್ಸು ಮಾಡಿದ್ದರಿಂದ ಸೀತಾಳಯ್ಯನ ಗಿರಿ ಎಂಬ ಹೆಸರು ಬಂದಿದೆ. ಇಲ್ಲಿ ಈಶ್ವರ ದೇವಾಲಯವಿದೆ. ಇಲ್ಲಿಂದ ಸುಮಾರು ಎರಡು ಕಿಲೋಮೀಟರ್ ಗಳ ಅಂತರದಲ್ಲಿದೆ ಮುಳ್ಳಯ್ಯನಗಿರಿ ಬೆಟ್ಟ.

ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು, ನಂತರದ ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ನಡೆದು ಸಾಗಬೇಕು. ಜೋರಾಗಿ ಬೀಸುವ ಗಾಳಿ ಜೊತೆ ಬೆಟ್ಟ ಹತ್ತುವ ಅನುಭವವೇ ಬೇರೆ. ಬೆಟ್ಟದ ತುದಿ ತಲುಪಿದಾಗ ಶ್ರೀ ಗುರು ಮುಳ್ಳಪ್ಪ ಸ್ವಾಮಿ ಮಾಡಿರುವ ಗದ್ದುಗೆ ಹಾಗೂ ದೇವಾಲಯ ಸಿಗುತ್ತದೆ.
ಅಂದಹಾಗೆ, ಈ ಗಿರಿಗೆ ಭೇಟಿ ನೀಡಿಲ್ಲ ಅಂದ್ರೆ ಮಿಸ್ ಮಾಡದೆ ಭೇಟಿ ನೀಡಿ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...