alex Certify ಟ್ರಂಪ್ ಕಾರ್ಡ್ ಅಲ್ಲ, ಜನ ಬ್ಯಾಕ್ ಗ್ರೌಂಡ್ ನ್ನು ನೋಡ್ತಾರೆ; ಡಿ.ಕೆ.ಶಿವಕುಮಾರ್ ಗೆ HDK ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್ ಕಾರ್ಡ್ ಅಲ್ಲ, ಜನ ಬ್ಯಾಕ್ ಗ್ರೌಂಡ್ ನ್ನು ನೋಡ್ತಾರೆ; ಡಿ.ಕೆ.ಶಿವಕುಮಾರ್ ಗೆ HDK ತಿರುಗೇಟು

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮಗೂ ಒಂದು ಅವಕಾಶ ಕೊಡಿ ಎಂದು ಕೇಳಿರುವುದು ತಪ್ಪಲ್ಲ, ಜನರ ಕೆಲಸ ಮಾಡಿದ್ದೇನೆ ಮತ ಕೊಡಿ ಎನ್ನಬಹುದು. ಆದರೆ ಕೇವಲ ಅಧಿಕಾರಕ್ಕಾಗಿ ಕೇಳಿದರೆ ಆಗಲ್ಲ, ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಹೆಚ್ ಡಿಕೆಯನ್ನು ಸೋಲಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ನನ್ನನ್ನು ಸೋಲಿಸಿರಬಹುದು. ಆಗ ನಾನು ರಾಜಕೀಯವಾಗಿ ಅಂಬೆಗಾಲು ಇಡುತ್ತಿದ್ದೆ. ಆದರೆ ಹೆಚ್.ಡಿ.ದೇವೇಗೌಡರ ವಿರುದ್ಧ ಅವರು 2 ಸಲ ಸೋತಿದ್ದಾರೆ ಎಂದರು.

ಡಿಕೆಶಿ ಚುನಾವಣೆ ಗೆದ್ದು ಬಂದಿರುವ ಇತಿಹಾಸ ನಮಗೂ ಗೊತ್ತಿದೆ. ಯಾವ ರೀತಿಯಲ್ಲಿ ಚುನಾವಣೆ ಗೆದ್ದರು ಎಂಬುದು ನಮಗೆ ಗೊತ್ತಿಲ್ಲವಾ? ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. ಜನ ಅವರ ಹಿಂದಿನ ಬ್ಯಾಕ್ ಗ್ರೌಂಡ್ ಕೂಡ ನೋಡ್ತಾರೆ. ಒಕ್ಕಲಿಗ ಟ್ರಂಪ್ ಕಾರ್ಡ್ ಎಂಬ ಕಾರಣಕ್ಕೆ ಮತ ಹಾಕಲ್ಲ ಎಂದು ತಿರುಗೇಟು ನೀಡಿದರು.

ಸುಮ್ಮನೇ ನಾನೂ ಸಿಎಂ ಆಗ್ಬೇಕು ಎಂದರೆ ಸಾಲದು, ಅಭಿವೃದ್ಧಿಯನ್ನು ಹೇಗೆ ಮಾಡಿದ್ದೇನೆ, ಯಾವರೀತಿ ಮಾಡುತ್ತಿದ್ದೇನೆ ಎಂಬುದೂ ಮುಖ್ಯ. ಒಕ್ಕಲಿಗ ಟ್ರಂಪ್ ಕಾರ್ಡ್ ಬಗ್ಗೆ ಜನರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...