ಟೊಮೆಟೊ ಕೆಚಪ್ ಅನ್ನು ನೀವು ಅಡುಗೆ ಕೆಲಸಗಳಿಗೆ ಮಾತ್ರ ಸೀಮಿತಪಡಿಸಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದು ನೋಡಿ.
ಮ್ಯಾಗಿ, ಚಪಾತಿಯೊಂದಿಗೆ ಮಕ್ಕಳು ಇಷ್ಟಪಟ್ಟು ಸವಿಯುವ ಟೊಮೆಟೊ ಕೆಚಪ್ ಅನ್ನು ಮನೆಯಲ್ಲೂ ತಯಾರಿಸಬಹುದು. ಅಡುಗೆಗೆ ರುಚಿ ಹೆಚ್ಚಿಸುವ ಇದು ಹಲವು ರೂಪದಲ್ಲಿ ಇಂದು ಮಳಿಗೆಗಳಲ್ಲಿ ಲಭ್ಯವಿದೆ.
ಇದರಲ್ಲಿ ವಿನೆಗರ್ ಹಾಗೂ ಸಿಟ್ರಿಕ್ ಆಮ್ಲ ಇರುವುದರಿಂದ ಇದು ಪಾತ್ರೆ ಹಾಗೂ ಆಭರಣಗಳಿಗೆ ಹಿಡಿದ ತುಕ್ಕನ್ನು ದೂರ ಮಾಡುತ್ತದೆ. ಕೆಚಪ್ ನಲ್ಲಿ ಹತ್ತು ನಿಮಿಷ ನೆನೆಸಿಟ್ಟು ಬಳಿಕ ಬ್ರಶ್ ನಲ್ಲಿ ತಿಕ್ಕಿ ತೊಳೆಯುವುದರಿಂದ ಚಿನ್ನ ಹೊಳಪನ್ನು ಪಡೆಯುತ್ತದೆ.
ಸೊಳ್ಳೆ ಅಥವಾ ಇತರ ಯಾವುದಾದರೂ ಹುಳಗಳು ಕಚ್ಚಿ ಸಣ್ಣ ಗಾಯವಾಗಿದ್ದರೆ, ಇದು ವಿಪರೀತ ತುರಿಕೆ ಉಂಟು ಮಾಡಿದ್ದರೆ ಆ ಜಾಗಕ್ಕೆ ಟೊಮೆಟೊ ಕೆಚಪ್ ಹಚ್ಚಿ ನೋಡಿ. ರಾಶಸ್ ಸಮಸ್ಯೆಯನ್ನು ಇದು ದೂರ ಮಾಡುತ್ತದೆ.
ಸ್ನಾನ ಮಾಡುವ ಮುನ್ನ ಹದಿನೈದು ನಿಮಿಷ ಇದನ್ನು ತಲೆಗೆ ಹಚ್ಚಿ ತೊಳೆದುಕೊಳ್ಳುವುದರಿಂದ ಕೂದಲು ಹೊಳೆಯುವುದು ಮಾತ್ರವಲ್ಲ ನೀಳವಾಗಿ ಬೆಳೆಯುತ್ತದೆ. ಆದರೆ ಮನೆಯಲ್ಲೇ ತಯಾರಿಸಿದ ಕೆಚಪ್ ಗೆ ಆದ್ಯತೆ ನೀಡಿ.