alex Certify ಟೇಸ್ಟಿ ʼಚಿಕನ್​ ಹರಿಯಾಲಿʼ ಮಾಡೋದು ಎಷ್ಟು ಸಿಂಪಲ್​ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೇಸ್ಟಿ ʼಚಿಕನ್​ ಹರಿಯಾಲಿʼ ಮಾಡೋದು ಎಷ್ಟು ಸಿಂಪಲ್​ ಗೊತ್ತಾ…?

ಬೇಕಾಗುವ ಸಾಮಗ್ರಿ: ಚಿಕನ್​ 1 ಕೆಜಿ, ಈರುಳ್ಳಿ 4, ಎಣ್ಣೆ, ಪುದೀನಾ ಸೊಪ್ಪು 1 ಕಪ್​, ಹಸಿ ಮೆಣಸು 13, ಏಲಕ್ಕಿ 6, ಚಕ್ಕೆ 4 ಚಿಕ್ಕ ತುಂಡು, ಕಸೂರಿ ಮೇತಿ ಸ್ವಲ್ಪ,  ಜೀರಿಗೆ ಪುಡಿ ಅರ್ಧ ಚಮಚ, ಕಾರದ ಪುಡಿ 2 ಚಮಚ, ಗರಂ ಮಸಾಲಾ 2 ಚಮಚ, ಅರಿಶಿಣ 1/2 ಚಮಚ, ಮೊಸರು 1 ಕಪ್​, ಶುಂಠಿ – ಬೆಳ್ಳುಳ್ಳಿ  ಪೇಸ್ಟ್ 2 ದೊಡ್ಡ ಚಮಚ, ಕೊತ್ತಂಬರಿ ಸೊಪ್ಪು 1 ಕಪ್​, ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಮೊಸರು ಹಾಗೂ ಹಸಿ ಮೆಣಸನ್ನ ಹಾಕಿ ಮಿಕ್ಸಿಯಲ್ಲಿ ಗ್ರೈಂಡ್​ ಮಾಡಿಕೊಳ್ಳಿ. ಈ ಮಿಶ್ರಣವನ್ನ ಚೆನ್ನಾಗಿ ತೊಳೆದುಕೊಂಡ ಚಿಕನ್​ ಪೀಸ್​ಗಳ ಜೊತೆ ಸೇರಿಸಿ ಮ್ಯಾರಿನೇಟ್​ ಮಾಡಿಡಿ. ಇದಾದ  ಬಳಿಕ ಒಂದು ಪಾತ್ರೆಯಲ್ಲಿ  ಎಣ್ಣೆ ಹಾಕಿ ಅದರಲ್ಲಿ ಚಕ್ಕೆ, ಏಲಕ್ಕಿ, ಈರುಳ್ಳಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್​​ನ್ನು ಹಾಕಿ ಈರುಳ್ಳಿ ಹೊಂಬಣ್ಣ ಬರುವವರೆಗೂ ಹುರಿಯಿರಿ .  ಇದಕ್ಕೆ ಇವಾಗ ಮ್ಯಾರಿನೇಟ್​ ಮಾಡಿಟ್ಟ ಚಿಕನ್​ ಹಾಗೂ ಕಾರದಪುಡಿ, ಗರಂ ಮಾಸಾಲಾ ಅರಿಶಿಣ, ಕಸೂರಿ ಮೇತಿ,  ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪನ್ನ ಹಾಕಿ ಚಿಕನ್ ಪೀಸ್​ಗಳು ಬೇಯುವರೆಗೂ ಒಲೆಯ ಮೇಲಿಡಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...