ಅನೇಕರಿಗೆ ಅನ್ನ ಅಂದ್ರೆ ತುಂಬಾ ಇಷ್ಟ. ದಿನದ ಮೂರು ಹೊತ್ತು ಊಟ ಮಾಡುವವರಿದ್ದಾರೆ. ಅನ್ನಕ್ಕೆ ಬಗೆ ಬಗೆಯ ಮಸಾಲೆ ಬೆರೆಸಿ ರೈಸ್ ಬಾತ್ ರೂಪದಲ್ಲಿ ಸೇವಿಸ್ತಾರೆ. ಅದ್ರಲ್ಲಿ ಫ್ರೈಡ್ ರೈಸ್ ಕೂಡ ಒಂದು. ಮಾಡಲು ಸುಲಭ ಹಾಗೂ ರುಚಿರುಚಿ ಫ್ರೈಡ್ ರೈಸ್ ಮಾಡುವ ವಿಧಾನ ಇಲ್ಲಿದೆ.
ಫ್ರೈಡ್ ರೈಸ್ ಮಾಡಲು ಬೇಕಾಗುವ ಪದಾರ್ಥ :
ಒಂದು ಚಮಚ ಆಲಿವ್ ಆಯಿಲ್
ಎರಡು ಕಪ್ ಅನ್ನ
ಸ್ವಲ್ಪ ಕೇಸರಿ
½ ಕಪ್ ಈರುಳ್ಳಿ
3-4 ತುಳಸಿ ಎಲೆ
¼ ಕಪ್ ಕತ್ತರಿಸಿದ ದೊಣ್ಣೆ ಮೆಣಸಿನಕಾಯಿ
2 ಮೊಗ್ಗು ಬೆಳ್ಳುಳ್ಳಿ
1 ಸಣ್ಣ ಚಮಚ ಕೆಂಪು ಮೆಣಸಿನ ಪುಡಿ
½ ಚಮಚ ಸಕ್ಕರೆ
ರುಚಿಗೆ ತಕ್ಕಷ್ಟು ಉಪ್ಪು
½ ಕಪ್ ಟೋಮೊಟೋ
½ ಕಪ್ ಕತ್ತರಿಸಿದ ಕ್ಯಾರೆಟ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಪ್ರೈಡ್ ರೈಸ್ ಮಾಡುವ ವಿಧಾನ:
ಮೊದಲು ಅನ್ನಕ್ಕೆ ಸ್ವಲ್ಪ ಕೇಸರಿ ಬೆರೆಸಿ ಪಕ್ಕದಲ್ಲಿಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ಹಾಗೂ ದೊಣ್ಣೆ ಮೆಣಸನ್ನು ಹಾಕಿ ಫ್ರೈ ಮಾಡಿ.
ನಂತ್ರ ಬೆಳ್ಳುಳ್ಳಿ, ಮೆಣಸಿನ ಪುಡಿ, ಟೋಮೋಟೋ, ಕ್ಯಾರೆಟ್, ಸಕ್ಕರೆ,ಉಪ್ಪು, ತುಳಸಿ ಎಲೆಯನ್ನು ಹಾಕಿ ಮಿಕ್ಸ್ ಮಾಡಿ.
ಇದಕ್ಕೆ ಅನ್ನವನ್ನು ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ, ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದ್ರೆ ಫ್ರೈಡ್ ರೈಸ್ ರೆಡಿ.