ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ ಮಸ್ ರಜೆ ಆಗಮಿಸುತ್ತಿದೆ. ಚಳಿಗಾಲದ ರಜೆ ಹಾಗೂ ಹಬ್ಬ ಹರಿದಿನಗಳು ನಿಮ್ಮ ಖುಷಿಯನ್ನು ಇಮ್ಮಡಿಪಡಿಸಲು ಸಿದ್ಧವಾಗುತ್ತಿವೆ. ಹೊಸ ವರ್ಷದ ಆಗಮನದ ಸಂದರ್ಭದಲ್ಲಿ ನೀವು ರುಚಿಕರವಾದ ಆಹಾರದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಬಹುದು. ಹಾಗೇ ಒಟ್ಟಿಗೆ ಕುಳಿತು ಊಟ ಮಾಡುವ ಡೈನಿಂಗ್ ಟೇಬಲ್ ಸೆಟ್ ಮಾಡುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ ಇಲ್ಲಿದೆ ಟಿಪ್ಸ್.
ಪರಿಪೂರ್ಣವಾದ ಡೈನಿಂಗ್ ಟೇಬಲ್ ಸೆಟ್ ಮಾಡಲು ನೀವು ತಿಳಿದಿರಬೇಕಾದ ಕೆಲವು ಸಂಗತಿಗಳು ಇಲ್ಲಿವೆ. ತಟ್ಟೆಯ ಎಡಭಾಗದಲ್ಲಿ ಫೋರ್ಕ್ ಮತ್ತು ಚಮಚಗಳನ್ನಿಡಿ. ಬಲಭಾಗದಲ್ಲಿ ಗ್ಲಾಸ್ ಹಾಗೂ ಸ್ಟೆಮ್ ವೇರ್ ಗಳನ್ನು ಮತ್ತು ಡಿನ್ನರ್ ಪ್ಲೇಟ್ ಗಳನ್ನು ಹೊಂದಿಸಿಡಿ.
‘ಪುಷ್ಪ’ ಚಿತ್ರದ ಮೂರು ದಿನದ ಕಲೆಕ್ಷನ್ ಎಷ್ಟು ಗೊತ್ತಾ….?
ಡೈನಿಂಗ್ ಟೇಬಲ್ ಮೇಲೆ ಹೂವುಗಳನ್ನು ಇಡುವುದರಿಂದ ಅವು ಕ್ಲಾಸಿ ವಾತಾವರಣವನ್ನು ಸೃಷ್ಟಿಸುತ್ತವೆ. ನೀರಿನಿಂದ ತುಂಬಿದ ಹಿತ್ತಾಳೆ ಬಟ್ಟಲಿನ ಮೇಲೆ ಲಿಲ್ಲಿ ಹೂವನ್ನು ಜೋಡಿಸಿಟ್ಟರೆ ಅದರ ಸೊಗಸೇ ಬೇರೆ.
ಟೇಬಲ್ ಮ್ಯಾಟ್ ಹಾಗೂ ಕವರ್ ಗಳತ್ತ ಗಮನ ಕೊಡಲು ಮರೆಯದಿರಿ. ಇದರ ವಿನ್ಯಾಸ ಹಾಗೂ ಬಣ್ಣ ನಿಮ್ಮ ಊಟದ ಕೊಠಡಿ ಹಾಗೂ ಟೇಬಲ್ ಗೆ ವಿಶೇಷ ಮೆರುಗು ನೀಡುತ್ತದೆ.