ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ಟೆಸ್ಟ್ ಸರಣಿಯ ಕುರಿತು ಮಾತನಾಡಿದ್ದಾರೆ.
ಜೊತೆಗೆ ಈ ಸರಣಿಯಲ್ಲಿ ಗೆಲ್ಲುವವರು ಯಾರು ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಅವರ ಪ್ರಕಾರ ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಕೇವಲ 49% ಚಾನ್ಸ್ ಇದೆ, ಅದೇ ವಿರೋಧಿ ತಂಡಕ್ಕೆ 51% ಗೆಲ್ಲುವ ಚಾನ್ಸ್ ಇದೆ ಎಂದು ಹೇಳಿದ್ದಾರೆ. ಈ ಸರಣಿಯಲ್ಲಿ ವಿಜೇತರನ್ನ ಗುರುತಿಸುವುದು ಕಷ್ಟ, ನನ್ನ ಪ್ರಕಾರ ಈ ಸರಣಿ ಡ್ರಾ ಆಗುತ್ತದೆ. ಒಂದು ವೇಳೆ ಯಾವುದಾದರು ತಂಡ ಗೆದ್ದರೆ ಅದು ಭಾರತವಲ್ಲ, ದಕ್ಷಿಣ ಆಫ್ರಿಕಾ ಎಂದಿದ್ದಾರೆ.
ಕಾಂಗೋದಲ್ಲಿ ಆತ್ಮಾಹುತಿ ಬಾಂಬ್ ದಾಳಿ – ಐವರು ಬಲಿ
ಚೋಪ್ರಾ ಅವರ ಪ್ರಕಾರ ಸೌತ್ ಆಫ್ರಿಕಾದ ವೇಗಿ ಅನ್ರಿಚ್ ನಾರ್ಟ್ಜೆಯನ್ನ ಹೊರಗಿಡದಿದ್ದರೆ ಜಯ ಇವರ ಪಾಲಿಗಿರುತ್ತಿತ್ತು ಎಂದಿದ್ದಾರೆ. ಈ ಬಗ್ಗೆಯು ವಿವರಿಸಿರುವ ಅವರು, ಅನ್ರಿಚ್ ನಾರ್ಟ್ಜೆ ಅವರನ್ನು ಹೊರಗಿಟ್ಟ ನಂತರ ದಕ್ಷಿಣ ಆಫ್ರಿಕಾದ ಸರಣಿ ಗೆಲ್ಲುವ ಅವಕಾಶಗಳು ಹೇಗೆ ಕುಸಿಯಿತು ಎಂಬುದನ್ನು ತಿಳಿಸಿದ್ದಾರೆ.
ಭಾರತವು ಈ ಸರಣಿಯನ್ನ ಗೆಲ್ಲಬಹುದು ಎಂದು ನನಗೆ ಅನ್ನಿಸುತ್ತಿಲ್ಲ. ನಾರ್ಟ್ಜೆ ಆಡುತ್ತಿದ್ದರೆ ನಾನು ದಕ್ಷಿಣ ಆಫ್ರಿಕಾ ಗೆಲ್ಲಬಹುದು ಎಂದು ಖಚಿತವಾಗಿ ಹೇಳುತ್ತಿದ್ದೆ. ನಾರ್ಟ್ಜೆ ಇಲ್ಲ, ಈ ಸರಣಿಯು ಮತ್ತೆ 1-1 ರಲ್ಲಿ ಕೊನೆಗೊಳ್ಳಬಹುದು ಎಂದು ನನಗನ್ನಿಸುತ್ತಿದೆ. ಟೆಸ್ಟ್ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ, ಮೊದಲ ಟೆಸ್ಟ್‌ಗೆ ಮಳೆಯಿಂದಾಗಿ ಸ್ವಲ್ಪ ತೊಂದರೆಯಾಗಬಹುದು ಎಂದು ಚೋಪ್ರಾ ಹೇಳಿದ್ದಾರೆ.