
ಮೂರನೇ ದಿನದ ಪಂದ್ಯದ ವೇಳೆ, ಓವರ್‌ಗಳ ಬದಲಾವಣೆಯ ಸಮಯದಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿದ್ದಾರೆ. ಬಹುಶಃ ತಮ್ಮ ತಂಡದ ಪ್ರಭಾವಿ ಪ್ರದರ್ಶನದಿಂದಾಗಿ ಕೊಹ್ಲಿ ಸಂತೋಷದ ಮೂಡ್‌ನಲ್ಲಿದ್ದಾರೆಂದು ತೋರುತ್ತದೆ. ಹೀಗಾಗಿ ಖುಷಿಯನ್ನು ಡ್ಯಾನ್ಸ್ ಮಾಡುವ ಮುಖಾಂತರ ಹೊರಹಾಕಿದ್ದಾರೆ.
ಇತ್ತೀಚಿಗೆ ನಾಯಕತ್ವ ವಿಚಾರದಲ್ಲಿ ಕೆಲವೊಂದು ಹಿನ್ನಡೆಗಳನ್ನು ಅನುಭವಿಸಿದ ನಂತರ ನಾಯಕ ಉಲ್ಲಾಸದಿಂದ ಇರುವುದನ್ನು ನೋಡಿದ ಅಭಿಮಾನಿಗಳು ಕೂಡ ಸಂತೋಷಪಟ್ಟಿದ್ದಾರೆ. ಈ ವಿಡಿಯೋ ಅವರ ಬೆಂಬಲಿಗರನ್ನು ಹುರಿದುಂಬಿಸಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿರಾಟ್ ಕೊಹ್ಲಿಯ ಉಲ್ಲಾಸದ ನೃತ್ಯವನ್ನು ಆನಂದಿಸಿದ್ದಾರೆ.