
ಹೌದು, ಈ ಯಂತ್ರದಲ್ಲಿ ಹಿಟ್ಟನ್ನು ಮಿಕ್ಸ್ ಮಾಡುವ ಕಷ್ಟ ಕೂಡ ಇಲ್ಲ. ಮಿಕ್ಸಿಂಗ್ ನಿಂದ ಹಿಡಿದು ಚಪಾತಿ ಆಕಾರದಲ್ಲಿ ಸಿದ್ಧವಾಗಿ ಬೇಯಿಸಿಯೇ ಬರುತ್ತದೆ. ನಿಮಗೂ ಈ ಯಂತ್ರ ಖರೀದಿಸಬೇಕಾ…? ಇದರ ಬೆಲೆ ಬರೋಬ್ಬರಿ ಒಂದು ಲಕ್ಷದ 11 ಸಾವಿರ ರೂಪಾಯಿಗಳು..! ರೊಟಿಮ್ಯಾಟಿಕ್ ರೊಟ್ಟಿಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುತ್ತದೆ. ಆದರೆ, ಇದರ ಬೆಲೆ ಕೇಳಿ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಗಾಗಿದ್ದಾರೆ. ಅಬ್ಬಬ್ಬಾ…… ಇದಕ್ಕೆ ಇಷ್ಟೊಂದು ಹಣ ಕೊಡುವ ಬದಲು, ಯಂತ್ರಕ್ಕಿಂತ ವೇಗವಾಗಿ ನಾವೇ ಚಪಾತಿ ತಯಾರಿಸಬಹುದು ಅಂತೆಲ್ಲಾ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ರೋಟಿಮ್ಯಾಟಿಕ್ ಯಂತ್ರವು ಹಿಟ್ಟನ್ನು ಮಿಶ್ರಣ ಮಾಡೋದ್ರಿಂದ ಹಿಡಿದು, ಅದನ್ನು ಲಟ್ಟಿಸಿ ಪಫಿಂಗ್ ನವರೆಗೆ ಸಿದ್ಧವಾಗಿ ಬರುತ್ತದೆ. ಅಲ್ಲದೆ ಇದು ಹಲವಾರು ಬಗೆಯ ರೋಟಿಗಳನ್ನು ಮಾಡಬಹುದು. ಸಂಪೂರ್ಣ ಗೋಧಿ ರೊಟ್ಟಿ, ಜೋವರ್ ರೊಟ್ಟಿ, ಬಜ್ರಾ ರೊಟ್ಟಿ, ಪುರಿ, ಪಿಜ್ಜಾ, ಮಲ್ಟಿಗ್ರೇನ್ ರೊಟ್ಟಿ ಇತ್ಯಾದಿ. ಪದಾರ್ಥಗಳನ್ನು ಈ ಯಂತ್ರಕ್ಕೆ ಲೋಡ್ ಮಾಡಿದ್ರೆ, ಸಾಕು ಉಳಿದ ಕೆಲಸವನ್ನು ಇದೇ ಮಾಡುತ್ತದೆ.