ಟೆಕ್ ಮಹೀಂದ್ರದ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಹಾಗೂ ಇನ್ಫೋಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ.
ಇನ್ಫೋಸಿಸ್ ನಲ್ಲಿ ಜಾಗತಿಕ ಹಣಕಾಸು ಸೇವೆಗಳು, ಆರೋಗ್ಯ ಸೇವೆ ಮತ್ತು ಸಾಫ್ಟ್ ವೇರ್ ವಹಿವಾಟುಗಳ ಮುಖ್ಯಸ್ಥರಾಗಿದ್ದ ಮೋಹಿತ್ ಜೋಶಿ ಕೆಲ ಕಾಲದ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಆ ಬಳಿಕ ಈ ನೇಮಕಾತಿ ಘೋಷಿಸಲಾಗಿದೆ.
ಟೆಕ್ ಮಹಿಂದ್ರದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿದ್ದ ಸಿ.ಪಿ. ಗುರ್ನಾನಿ ಅವರು ಡಿಸೆಂಬರ್ 19ರಂದು ನಿವೃತ್ತರಾಗುತ್ತಿದ್ದು, ಅವರ ಸ್ಥಾನಕ್ಕೆ ಮೋಹಿತ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ ಎಂದು ಟೆಕ್ ಮಹೇಂದ್ರ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.