alex Certify ಟೆಕ್ಸಾಸ್ ನಲ್ಲಿ ಬಿರುಗಾಳಿ ಸಹಿತ ಮೀನುಗಳ ಮಳೆ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಕ್ಸಾಸ್ ನಲ್ಲಿ ಬಿರುಗಾಳಿ ಸಹಿತ ಮೀನುಗಳ ಮಳೆ……!

ಟೆಕ್ಸಾಸ್: ಗುಡುಗು-ಮಿಂಚು ಸಹಿತ ಮಳೆ, ಆಲಿಕಲ್ಲು ಮಳೆಯಾಗುವುದು ಮುಂತಾದವುಗಳ ಬಗ್ಗೆ ನೀವು ಕೇಳಿರಬಹುದು. ಆದರೆ, ಎಂದಾದ್ರೂ ಮೀನುಗಳ ಮಳೆಯನ್ನು ನೀವು ಕೇಳಿದ್ದೀರಾ..? ಹೌದು, ಬಿರುಗಾಳಿ ಸಹಿತ ಮಳೆಯುಂಟಾದ ಪರಿಣಾಮ ಆಕಾಶದಿಂದ ಮೀನುಗಳು ಬಿದ್ದಿರುವ ವಿಲಕ್ಷಣ ಘಟನೆಗೆ ಅಮೆರಿಕದ ನಗರವೊಂದು ಸಾಕ್ಷಿಯಾಗಿದೆ.

ಯುಎಸ್ ರಾಜ್ಯದ ಟೆಕ್ಸಾಸ್‌ನಲ್ಲಿರುವ ಟೆಕ್ಸರ್ಕಾನಾ ನಗರವು ಈ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇದು ಕಪ್ಪೆಗಳು, ಏಡಿಗಳು ಅಥವಾ ಸಣ್ಣ ಮೀನುಗಳು ಜಲಪಾತದಲ್ಲಿ ಕೊಚ್ಚಿಹೋದಾಗ ಸಂಭವಿಸುತ್ತದೆ.

ಟೆಕ್ಸರ್ಕಾನಾ ನಗರದ ಫೇಸ್ಬುಕ್ ಪುಟದಲ್ಲಿ ಮೀನಿನ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಬುಧವಾರದಂದು ಟೆಕ್ಸರ್ಕಾನಾದಲ್ಲಿ ಮೀನಿನ ಮಳೆಯಾಗಿದೆ, ಇದು ನಿಜವಾಗಿಯೂ ತಮಾಷೆಯಲ್ಲ. ಅಸಾಮಾನ್ಯವಾಗಿದ್ದರೂ, ಟೆಕ್ಸರ್ಕಾನಾದ ಹಲವಾರು ಪ್ರದೇಶಗಳು ಇದಕ್ಕೆ ಸಾಕ್ಷಿಯಾಗಿದೆ ಎಂದು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಇದೊಂದು ಹುಚ್ಚುತನ ಅಂತಾ ಜರೆದಿದ್ದಾರೆ.

https://www.facebook.com/texarkanatexas/posts/287678246727984

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...