ಕ್ಯಾನ್ಸರ್ ಇಡೀ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು. ICMR ಪ್ರಕಾರ 2022 ರಲ್ಲಿ ಭಾರತದಲ್ಲಿ 14.6 ಲಕ್ಷ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಇದು 2025ರ ವೇಳೆಗೆ 15.7 ಲಕ್ಷಕ್ಕೆ ತಲುಪಬಹುದು. ಕ್ಯಾನ್ಸರ್ ಒಂದು ಮಾರಕ ರೋಗ. ಇದು ಎಷ್ಟು ಅಪಾಯಕಾರಿ ಎಂದರೆ ಕಳೆದ ವರ್ಷ 8 ಲಕ್ಷ ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಕ್ಯಾನ್ಸರ್‌ಗೆ ಮುಖ್ಯ ಕಾರಣಗಳೆಂದರೆ ಕಳಪೆ ಆಹಾರ, ವಾಯು ಮಾಲಿನ್ಯ ಮತ್ತು ದೈಹಿಕ ಚಟುವಟಿಕೆಯ ಕೊರತೆ. ಪ್ರತಿದಿನದ ನಮ್ಮ ಕೆಲವೊಂದು ಅಭ್ಯಾಸಗಳು ಕ್ಯಾನ್ಸರ್ ಅನ್ನು ಉತ್ತೇಜಿಸುತ್ತವೆ. ನಾವು ಬಳಸುವ ಟೂತ್‌ಪೇಸ್ಟ್ ಮತ್ತು ಶಾಂಪೂ ಕೂಡ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂಬ ಆತಂಕ ಎದುರಾಗಿದೆ. ಟೊರೊಂಟೊ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ ಟೂತ್‌ಪೇಸ್ಟ್‌ನಲ್ಲಿ ಟ್ರೈಕ್ಲೋಸನ್ ಸಂಯುಕ್ತವು ಕಂಡುಬರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶವನ್ನು ಸಕ್ರಿಯಗೊಳಿಸುವ ಉತ್ಪನ್ನ ಇದು. ಅನೇಕ ಟೂತ್‌ಪೇಸ್ಟ್‌ಗಳು ಹೆಚ್ಚಿನ ಪ್ರಮಾಣದ ಟ್ರೈಕೋಸನ್ ಅನ್ನು ಹೊಂದಿರುತ್ತವೆ, ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಟೂತ್‌ಪೇಸ್ಟ್‌ನಲ್ಲಿ ಕಂಡುಬರುವ ಟ್ರೈಕೋಸೇನ್ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಕರುಳಿನ ಕ್ಯಾನ್ಸರ್ ಹರಡಬಹುದು. ಅದಕ್ಕಾಗಿಯೇ ಟೂತ್ ಪೇಸ್ಟ್ ಅನ್ನು ಹೆಚ್ಚು ಬಳಸಬಾರದು.
ಅದೇ ರೀತಿ ಶಾಂಪೂ ಕೂಡ ಅಪಾಯಕಾರಿಯೇ. ತಜ್ಞರ ಪ್ರಕಾರ ಡ್ರೈ ಶಾಂಪೂ ಕ್ಯಾನ್ಸರ್‌ಗೆ ಕಾರಣವಾಗಬಹುದು. ಬೆಂಜೀನ್ ಎಂಬ ರಾಸಾಯನಿಕವು ಡ್ರೈ ಶಾಂಪೂದಲ್ಲಿ ಕಂಡುಬರುತ್ತದೆ. ಇದು ಶಾಂಪೂ ಬಳಕೆಯ ಸಮಯದಲ್ಲಿ ದೇಹಕ್ಕೆ ಹೋಗುತ್ತದೆ ಮತ್ತು ರಕ್ತದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ತಿಂಗಳುಗಳ ಹಿಂದಷ್ಟೆ ಅಮೆರಿಕದಲ್ಲಿ ಅನೇಕ ಬ್ರ್ಯಾಂಡ್‌ಗಳ ಡ್ರೈ ಶ್ಯಾಂಪೂಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಶಾಂಪೂವನ್ನು ಕೂಡ ಎಚ್ಚರಿಕೆಯಿಂದ ಬಳಸಬೇಕು.