ಬೆಳಿಗ್ಗೆ ಅಥವಾ ಸಂಜೆ ಟೀ ಬೇಕೇಬೇಕು. ಟೀ ಜೊತೆ ತಿಂಡಿ ಸವಿಯುವ ಆನಂದವೇ ಬೇರೆ. ವಿಶೇಷವಾಗಿ ಸಂಜೆ ಚಹಾದೊಂದಿಗೆ ರುಚಿಯಾದ ಮತ್ತು ಪೌಷ್ಟಿಕವಾದ ತಿಂಡಿ ಸಿಕ್ಕರೆ ಖುಷಿ ಡಬಲ್ ಆಗುತ್ತದೆ. ಮೆಕ್ಕೆ ಜೋಳದ ಪಾಪ್ಡಿ ಚಾಟ್ ಆರೋಗ್ಯಕರ ತಿಂಡಿ. ಇದನ್ನು ಮಾಡುವುದೂ ಸುಲಭ.
ಪಾಪ್ಡಿ ಚಾಟ್ ಗೆ ಬೇಕಾಗುವ ಪದಾರ್ಥ :
ಒಂದು ಕಪ್ ಮೆಕ್ಕೆಜೋಳದ ಹಿಟ್ಟು
ಕಾಲು ಕಪ್ ಮೈದಾ
ಒಂದು ಚಮಚ ಹಸಿರು ಚಟ್ನಿ
ಒಂದು ಚಮಚ ಒಣ ಶುಂಠಿ
ಬೇಯಿಸಿದ ಆಲೂಗಡ್ಡೆ
ಕತ್ತರಿಸಿದ ಈರುಳ್ಳಿ
ಕತ್ತರಿಸಿದ ಕೊತ್ತಂಬರಿ ಸೊಪ್ಪು
ಕೆಂಪು ಮೆಣಸಿನ ಪುಡಿ
ಕರಿಯಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಪಾಪ್ಡಿ ಚಾಟ್ ತಯಾರಿಕೆಯ ವಿಧಾನ :
ಮೆಕ್ಕೆಜೋಳದ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಜರಡಿ ಹಿಡಿದು, ಅದಕ್ಕೆ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಕಲಸಿಕೊಳ್ಳಿ. ಅದನ್ನು ಚಿಕ್ಕ ಉಂಡೆ ಮಾಡಿ ತೆಳ್ಳಗೆ ಲಟ್ಟಿಸಿಕೊಂಡು ತ್ರಿಕೋನ ಆಕಾರಗಳಾಗಿ ಕತ್ತರಿಸಿ. ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ. ನಂತ್ರ ತೆಗೆದು ಬಿಸಿ ಆರಲು ಬಿಡಿ.
ಗರಿಗರಿಯಾದ ಪಾಪ್ಡಿಗಳನ್ನು ಒಂದು ತಟ್ಟೆಯಲ್ಲಿ ಇಟ್ಟು ಅದರ ಮೇಲೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗಡ್ಡೆಗಳನ್ನು ಹಾಕಿ. ಮೊಸರು, ಚಟ್ನಿ, ಒಣ ಶುಂಠಿ ಮತ್ತು ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ.