
ಈ ಸಂದರ್ಭದಲ್ಲಿ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಡ್ಯಾನ್ಸ್ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ವಾಸ್ತವವಾಗಿ, ಮಿಥಾಲಿ ಅವರು ಗುಜರಾತ್ ಜೈಂಟ್ಸ್‌ಗೆ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ.
ಈಗ ವೈರಲ್ ಆಗಿರುವ ವೀಡಿಯೊವನ್ನು ಗುಜರಾತ್ ಜೈಂಟ್‌ನ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಕಿರು ವಿಡಿಯೋದಲ್ಲಿ, ಮಿಥಾಲಿ ರಾಜ್ ಜನಪ್ರಿಯ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕ್ಲಿಪ್ ವೀಕ್ಷಿಸಿದ ನಂತರ ಟ್ವಿಟರ್ ಬಳಕೆದಾರರು ನಂಬಲಾಗದಷ್ಟು ಸಂತೋಷಪಟ್ಟಿದ್ದಾರೆ.