IAS ಅಧಿಕಾರಿಗಳ ಪರಿಶ್ರಮ ಮತ್ತು ಯಶಸ್ಸಿನ ಕಥೆಗಳು ಸ್ಪೂರ್ತಿದಾಯಕವಾಗಿರುತ್ತವೆ. ಐಎಎಸ್ ಟಾಪರ್ ಡಾ.ರೇಣು ರಾಜ್ ಅವರದ್ದು ಕೂಡ ಇಂಥದ್ದೇ ಸಾಹಸಗಾಥೆಗಳಲ್ಲೊಂದು. ಡಾ.ರೇಣು 2014ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದಿದ್ದರು. ರೇಣು ಕೇರಳದ ಕೊಟ್ಟಾಯಂ ಮೂಲದವರು. ರೇಣು ಅವರ ತಂದೆ ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದಾರೆ.
ರೇಣು, ಸೇಂಟ್ ತೆರೇಸಾಸ್ ಹೈಯರ್ ಸೆಕೆಂಡರಿ ಸ್ಕೂಲ್, ಚಂಗನಾಸ್ಸೆರಿ (ಕೊಟ್ಟಾಯಂ) ನಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ರೇಣುಗೆ ಐಎಎಸ್ ಅಧಿಕಾರಿಯಾಗುವುದು ಬಾಲ್ಯದ ಕನಸಾಗಿತ್ತು. ರೇಣು ರಾಜ್ ಪ್ರಸ್ತುತ ಎರ್ನಾಕುಲಂನ ಕಲೆಕ್ಟರ್ ಆಗಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿಯಾದಾಗ ಈ ಕನಸು ಬಲವಾಯಿತು. ಈ ಅವಧಿಯಲ್ಲಿ ತನಗೆ ಬದುಕಿನ ಕಟು ವಾಸ್ತವಗಳ ಅರಿವಾಯಿತು ಎನ್ನುತ್ತಾರೆ ರೇಣು.
ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ರೇಣು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ರೇಣು ರಾಜ್ ಇತ್ತೀಚೆಗೆ ಶ್ರೀರಾಮ್ ವೆಂಕಟರಾಮನ್ ಅವರನ್ನು ವಿವಾಹವಾಗಿದ್ದಾರೆ. ಶ್ರೀರಾಮ್ ವೆಂಕಟರಾಮನ್ ಅವರಿಗೆ ಇದು ಮೊದಲ ಮದುವೆ. ಆದರೆ ರೇಣು ರಾಜ್‌ಗೆ ಇದು ಎರಡನೇ ವಿವಾಹ. ರೇಣು ಕೂಡ ಐಎಎಸ್ ಅಧಿಕಾರಿ ಟೀನಾ ಧಾಬಿ ಅವರಂತೆ ಅದ್ಭುತ ಚೆಲುವೆ. ಟೀನಾ ಕೂಡ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಾರೆ.
ರೇಣು ರಾಜ್ ಯುಪಿಎಸ್‌ಸಿ ಟಾಪರ್ ಆದಾಗಲೂ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಯುಪಿಎಸ್‌ಸಿ ಪರೀಕ್ಷೆಗಾಗಿ ಪ್ರತಿದಿನ 3-6 ಗಂಟೆಗಳ ಕಾಲ ಓದುತ್ತಿದ್ದರಂತೆ. ವೈದ್ಯಕೀಯ ಅಭ್ಯಾಸದ ಜೊತೆಗೆ ಓದನ್ನೂ ನಿಭಾಯಿಸಿದ್ದಾರೆ. ವೈದ್ಯೆಯಾಗಿ ರೋಗಿಗಳ ಸೇವೆ ಮಾಡಿರುವ ರೇಣು ಈಗ ಐಎಎಸ್ ಅಧಿಕಾರಿಯಾಗಿ ಜನಸೇವೆಗೆ ನಿಂತಿದ್ದಾರೆ.