100 ಗ್ರಾಂ ಕಡಲೆಹಿಟ್ಟು, 40 ಗ್ರಾಂ-ಅಕ್ಕಿಹಿಟ್ಟು, 2 ದೊಡ್ಡ ಈರುಳ್ಳಿ-ತೆಳ್ಳಗೆ ಹೆಚ್ಚಿಟ್ಟುಕೊಳ್ಳಿ, ½ ಟೀ ಸ್ಪೂನ್-ಕೊತ್ತಂಬರಿ ಪುಡಿ, ½ ಟೀ ಸ್ಪೂನ್-ಜೀರಿಗೆ, ¼ ಟೀ ಸ್ಪೂನ್-ಖಾರದಪುಡಿ, ¼ ಟೀ ಸ್ಪೂನ್-ಅರಿಶಿನ, ¼ ಟೀ ಸ್ಪೂನ್-ಕಾಳು ಮೆಣಸಿನಪುಡಿ, 1 ಟೀ ಸ್ಪೂನ್-ಉಪ್ಪು, 20-ಕರಿಬೇವು, 4-ಹಸಿಮೆಣಸು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ, 200 ಗ್ರಾಂ ಚೀಸ್, 5 ಟೇಬಲ್ ಸ್ಪೂನ್ –ನೀರು, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೊದಲು ಚೀಸ್ ಸ್ವಲ್ಪ ತುರಿದುಕೊಳ್ಳಿ, ಹಾಗೇ 10 ಪೀಸ್ ಹದಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಖಾರದಪುಡಿ, ಅರಿಶಿನ, ಜೀರಿಗೆ, ಕೊತ್ತಂಬರಿ ಪುಡಿ, ಕರಿಬೇವು, ಕಾಳುಮೆಣಸಿನ ಪುಡಿ, ಉಪ್ಪು, ತುರಿದ ಚೀಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದೊಂದು ಪೀಸ್ ಚೀಸ್ ತೆಗೆದುಕೊಂಡು ಅದನ್ನು ಈ ಬಜ್ಜಿ ಮಿಶ್ರಣದಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಕರಿಯಿರಿ.