![](https://kannadadunia.com/wp-content/uploads/2021/12/team.png)
ಒಮಿಕ್ರಾನ್. ಸದ್ಯ ಎಲ್ಲರ ಬಾಯಲ್ಲಿ ಓಡಾಡುತ್ತಿರುವ ಶಬ್ಧ. ಕೊರೊನಾ ರೂಪಾಂತರ ಒಮಿಕ್ರಾನ್ ಬಗ್ಗೆ ಆತಂಕ ಮನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಜನ್ಮತಳೆದ ಒಮಿಕ್ರಾನ್, ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಒಮಿಕ್ರಾನ್ ಕರಿನೆರಳು ಬಿದ್ದಂತಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ಟೀಂ ಇಂಡಿಯಾ ಡಿಸೆಂಬರ್ 8 ಅಥವಾ 9 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಾಗಿದೆ. ಈ ಪಂದ್ಯಗಳು ಜೋಹಾನ್ಸ್ ಬರ್ಗ್, ಸೆಂಚುರಿಯನ್, ಪರ್ಲ್ ಮತ್ತು ಕೇಪ್ ಟೌನ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯನ್ನು ಒಂದು ವಾರ ವಿಳಂಬವಾಗಿ ಶುರು ಮಾಡುವ ಬಗ್ಗೆ ಚರ್ಚೆಯಾಗ್ತಿದೆ. ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡೂ ಮಂಡಳಿಗಳು ಪರಸ್ಪರ ಸಂಪರ್ಕದಲ್ಲಿವೆ. ಈ ಬಗ್ಗೆ ಚರ್ಚೆಯಾಗ್ತಿದೆ. ಸರ್ಕಾರದ ಸೂಚನೆಗೆ ಕಾಯಲಾಗ್ತಿದೆ. ಒಮಿಕ್ರಾನ್ ಸೋಂಕಿನ ಸಂಖ್ಯೆಯನ್ನು ನಾವು ಗಮನಿಸುತ್ತಿದ್ದೇವೆಂದು ಅವರು ಹೇಳಿದ್ದಾರೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಎಂದವರು ಹೇಳಿದ್ದಾರೆ.
ಒಮಿಕ್ರಾನ್ ರೂಪಾಂತರದ ಸುದ್ದಿ ಹೊರಬಿದ್ದ ನಂತರ ಟೀಮ್ ಇಂಡಿಯಾದ, ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸಲು ಬಯಸುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ಹೇಳಿದೆ. ಎಲ್ಲಾ ಭಾರತೀಯ ಆಟಗಾರರು ಕಟ್ಟುನಿಟ್ಟಾದ ಕ್ವಾರಂಟೈನ್‌ಗೆ ಒಳಗಾಗುವ ಸಾಧ್ಯತೆಯಿದೆ.
ಭಾರತ – ದಕ್ಷಿಣ ಆಫ್ರಿಕಾ 2021-22 ಪೂರ್ಣ ವೇಳಾಪಟ್ಟಿ:
1 ನೇ ಟೆಸ್ಟ್ -ಡಿಸೆಂಬರ್ 17-21
2 ನೇ ಟೆಸ್ಟ್- ಡಿಸೆಂಬರ್ 26-30
3 ನೇ ಟೆಸ್ಟ್ –ಜನವರಿ 3-7
ಮೊದಲ ಏಕದಿನ ಪಂದ್ಯ – ಜನವರಿ 11
2ನೇ ಏಕದಿನ ಪಂದ್ಯ – ಜನವರಿ 14
3ನೇ ಏಕದಿನ ಪಂದ್ಯ – ಜನವರಿ 16
1ನೇ ಟಿ20 – ಜನವರಿ 19
2ನೇ ಟಿ20 -ಜನವರಿ 21
3 ನೇ ಟಿ20 – ಜನವರಿ 23
4ನೇ ಟಿ20 – ಜನವರಿ 26