alex Certify ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಫಿಟ್ನೆಸ್‌ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಫಿಟ್ನೆಸ್‌ ರಹಸ್ಯ

ಭಾರತದ ಯುವ ಕ್ರಿಕೆಟಿಗ ಶುಭಮನ್‌ ಗಿಲ್‌ ಈಗ ಎಲ್ಲರ ಫೇವರಿಟ್‌. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಾಲು ಸಾಲು ಶತಕ ಬಾರಿಸಿ ಮಿಂಚಿದ್ದಾರೆ ಈ ಸ್ಟಾರ್‌ ಬ್ಯಾಟ್ಸ್‌ಮನ್‌. ಶುಭಮನ್ ಗಿಲ್ ಕಿವೀಸ್ ಬೌಲರ್ ಗಳನ್ನು ಸದೆಬಡಿದಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ಗಿಲ್‌, ಒಂದು ಶತಕ ಮತ್ತು ದ್ವಿಶತಕ ಸೇರಿದಂತೆ 360 ರನ್ ಗಳಿಸಿದ್ದಾರೆ.

ಶುಬ್‌ಮನ್ ಗಿಲ್‌ರ ಪ್ರದರ್ಶನವನ್ನು ನೋಡ್ತಾ ಇದ್ರೆ ಅವರೊಬ್ಬ ಶ್ರೇಷ್ಠ ಆಟಗಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಕಳೆದ 18 ಇನ್ನಿಂಗ್ಸ್‌ಗಳಲ್ಲಿ 6 ಅರ್ಧ ಶತಕ, 4 ಶತಕ ಮತ್ತು ದ್ವಿಶತಕದ ಸಹಾಯದಿಂದ 1204 ರನ್ ಗಳಿಸಿದ್ದಾರೆ. 23ರ ಹರೆಯದ ಈ ಕ್ರಿಕೆಟಿಗ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ್ದಾರೆ. ಅಷ್ಟಕ್ಕೂ ಈ ಅದ್ಭುತ ಬ್ಯಾಟಿಂಗ್‌ ಹಿಂದಿರುವ ಸೀಕ್ರೆಟ್‌ ಏನು? ಶುಭಮನ್‌ ಗಿಲ್‌ರ ಫಿಟ್ನೆಸ್‌ ರಹಸ್ಯವೇನು ಅನ್ನೋದನ್ನು ನೋಡೋಣ.

ಜಿಮ್ಮಿಂಗ್: ಶುಭಮನ್‌ ಗಿಲ್‌ ನಿಯಮಿತವಾಗಿ ಜಿಮ್‌ನಲ್ಲಿ ವರ್ಕೌಟ್‌ ಮಾಡ್ತಾರೆ. ಕಠಿಣ ತಾಲೀಮು ನಡೆಸ್ತಾರೆ. ಸ್ವತಃ ತಾವೇ ಜಿಮ್‌ನಲ್ಲಿ ನಾನಾ ಕಸರತ್ತು ಮಾಡುವ ಮೂಲಕ ಫಿಟ್ನೆಸ್‌ ಕಾಪಾಡಿಕೊಂಡಿದ್ದಾರೆ.

ವ್ಯಾಯಾಮದಲ್ಲಿ ವ್ಯತ್ಯಾಸ: ಶುಭಮನ್‌ ಗಿಲ್‌ ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಡಂಬ್ಬೆಲ್ಸ್, ಚೆಸ್ಟ್ ಪ್ರೆಸ್ ಮುಂತಾದ ಅನೇಕ ರೀತಿಯ ವರ್ಕ್‌ಔಟ್‌ಗಳಿಗೆ ಒತ್ತು ನೀಡುತ್ತಾರೆ.

ಕಟ್ಟುನಿಟ್ಟಾದ ದಿನಚರಿ: ಕ್ರಿಕೆಟ್‌ನಲ್ಲಿ ಫಾರ್ಮ್‌ ಕಾಯ್ದುಕೊಳ್ಳಬೇಕಂದ್ರೆ ಫಿಟ್ನೆಸ್‌ ಕೂಡ ಬಹಳ ಮುಖ್ಯ. ಹಾಗಾಗಿ ಶುಭಮನ್ ಗಿಲ್ ತುಂಬಾ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಶಿಸ್ತು ಮತ್ತು ಆರೋಗ್ಯದ ಬಗ್ಗೆ ಸರಿಯಾದ ಕಾಳಜಿಯಿದ್ದಾಗ ಜೀವನಕ್ರಮವು ಪರಿಣಾಮಕಾರಿಯಾಗಿರುತ್ತದೆ ಎನ್ನುತ್ತಾರೆ ಅವರು.

ತೂಕದ ಬಗ್ಗೆ ಗಮನ: ನಮ್ಮ ನೆಚ್ಚಿನ ಆಹಾರವನ್ನು ಸಾಂದರ್ಭಿಕವಾಗಿ ಸೇವಿಸುವುದು ಸಹಜ. ಆದರೆ ತೂಕದ ಬಗ್ಗೆಯೂ ಕಾಳಜಿ ವಹಿಸಿ ಅನ್ನೋದು ಶುಭಮನ್ ಸಲಹೆ. ಇದನ್ನವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ರಜಾದಿನಗಳಲ್ಲಿ ಚೀಟ್‌ ಮೀಲ್‌ಗಳಿಂದ ಹೆಚ್ಚಾದ ತೂಕವನ್ನು ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾರೆ.

ತಾಲೀಮು: ಕ್ರಿಕೆಟ್‌ನಲ್ಲಿ ಯಶಸ್ಸು ಪಡೆಯಲು ಅಭ್ಯಾಸ ಬಹಳ ಮುಖ್ಯ. ಹಾಗಾಗಿ ಶುಭಮನ್‌ ತಾಲೀಮು ತಪ್ಪಿಸುವುದೇ ಇಲ್ಲ. ತಾವೇ ಸ್ವತಃ ಬ್ಯಾಟಿಂಗ್‌ ಕಲೆಗಳನ್ನು ಕರಗತ ಮಾಡಿಕೊಳ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...