
ಸಂಜು ಸ್ಯಾಮ್ಸನ್ ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಲಖ್ನೋದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಸಂಜು ಗಮನ ಸೆಳೆದಿದ್ದಾರೆ. 63 ಎಸೆತಗಳಲ್ಲಿ 86 ರನ್ ಗಳಿಸಿ ಮಿಂಚಿದ ಸಂಜು ಸ್ಯಾಮ್ಸನ್, ಕ್ರಿಕೆಟ್ ಪ್ರಿಯರಲ್ಲಿ ಭರವಸೆ ಮೂಡಿಸಿದ್ದಾರೆ. ಪಂದ್ಯ ಸೋತರೂ ಸಂಜು ಸ್ಯಾಮ್ಸನ್‌ರ ಸಮಯೋಚಿತ ಆಟವನ್ನು ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿರೋದು ಸಹಜ. ಸಂಜು ಸ್ಯಾಮ್ಸನ್‌ಗೆ ಈಗಾಗ್ಲೇ ಮದುವೆಯಾಗಿದೆ. ಕಾಲೇಜು ಸಹಪಾಠಿ ಚಾರುಲತಾರನ್ನು ವರಿಸಿದ್ದಾರೆ ಸಂಜು. 2018ರ ಡಿಸೆಂಬರ್‌ನಲ್ಲಿ ಕೋವಲಂನಲ್ಲಿ ಇವರ ವಿವಾಹ ನೆರವೇರಿತ್ತು.
ಸುಮಾರು 5 ವರ್ಷಗಳ ಕಾಲ ಡೇಟಿಂಗ್ ನಡೆಸ್ತಿದ್ದ ಸಂಜು ಹಾಗೂ ಚಾರುಲತಾ ಬಳಿಕ ಸಪ್ತಪದಿ ತುಳಿದಿದ್ದರು. ತಿರುವನಂತಪುರಂನ ಮಾರ್ಸ್ ಇವಾನಿಯಸ್ ಕಾಲೇಜಿನಲ್ಲಿ ಇಬ್ಬರೂ ಜೊತೆಯಾಗಿ ಓದಿದ್ದಾರೆ. ಮೊದಲು ಸಂಜು, ಚಾರುಲತಾಗೆ ಫೇಸ್ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರಂತೆ.

ಹೀಗೆ ಶುರುವಾದ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಚಾರುಲತಾ, ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಚಾರುಲತಾ ಮೂಲತಃ ಕೇರಳದ ತಿರುವನಂತಪುರಂನವರು. ಕಾಲೇಜಿನಲ್ಲಿ ಕ್ಲಾಸ್‌ಮೇಟ್ ಆಗಿದ್ದ ಚಾರುಲತಾ ಈಗ ಸಂಜು ಸ್ಯಾಮ್ಸನ್ ಅವರ ಜೀವದ ಗೆಳತಿಯಾಗಿದ್ದಾರೆ.
