alex Certify ಟಿ20 ವಿಶ್ವಕಪ್: ಹೈ ವೋಲ್ಟೇಜ್ ಪಂದ್ಯಕ್ಕೆ ಕಾದು ಕುಳಿತ ಪ್ರೇಕ್ಷಕರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವಕಪ್: ಹೈ ವೋಲ್ಟೇಜ್ ಪಂದ್ಯಕ್ಕೆ ಕಾದು ಕುಳಿತ ಪ್ರೇಕ್ಷಕರು..!

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಅಕ್ಟೋಬರ್ 16 ರಿಂದ ಪ್ರಾರಂಭವಾಗುತ್ತಿದೆ. ಈ ಬಾರಿಯ ವಿಶೇಷ ಹಾಗೂ ಅಭಿಮಾನಿಗಳ ವೀಕ್ಷಣೆ ಹೆಚ್ಚಿಸಿದೆ ಇಂಡಿಯಾ- ಪಾಕ್ ಪಂದ್ಯ. ಈಗಾಗಲೇ ಈ ಪಂದ್ಯದ 600,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆಯಂತೆ. ಇದರಲ್ಲಿ ಪ್ರಾಥಮಿಕ ಹಂತದ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಅಕ್ಟೋಬರ್ 22ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ.

ಆಸ್ಟ್ರೇಲಿಯಾದ ಏಳು ನಗರಗಳು ಈ ಟೂರ್ನಿಯನ್ನು ಆಯೋಜಿಸುತ್ತಿವೆ. ಮೊದಲು ನ್ಯೂಜಿಲೆಂಡ್ ವಿರುದ್ಧಆಸ್ಟ್ರೇಲಿಯಾ ಆಟವಾಡಲಿದೆ. 23ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಅಭಿಮಾನಿಗಳು, ಕ್ರಿಕೆಟ್ ಪ್ರಿಯರು ಎನ್ನದೇ ಎಲ್ಲರೂ ಈ ಪಂದ್ಯಕ್ಕೆ ಕಾದಿದ್ದಾರೆ. ಈ ಪಂದ್ಯ ವೀಕ್ಷಣೆಗೆ ಕೇವಲ 10 ನಿಮಿಷಗಳಲ್ಲಿ 90,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿರೋದು ವಿಶೇಷ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಇನ್ನು ಕ್ರಿಕೆಟ್ ಅನ್ನು ಲೈವ್ ಆಗಿ ನೋಡಬೇಕು ಎನ್ನುವವರು t20worldcup.com ನಲ್ಲಿ ಬುಕ್ ಮಾಡಬಹುದು. ಕಳೆದ ವರ್ಷ ಇಂಡಿಯಾಗೆ ಭಾರೀ ನಿರಾಸೆಯಾಗಿತ್ತು. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿತ್ತು ಪಾಕಿಸ್ತಾನ. ಆದರೆ ಈ ಬಾರಿ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ಈ ಬಾರಿ ಪಾಕಿಸ್ತಾನವನ್ನು ಇಂಡಿಯಾ ಸೋಲಿಸಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ ಇಂಡಿಯನ್ಸ್.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...