alex Certify ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಶಾಕ್; ಅಭ್ಯಾಸ ಪಂದ್ಯದ ವೇಳೆ ಕೊಹ್ಲಿಗೆ ತಾಗಿದ ಚೆಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಶಾಕ್; ಅಭ್ಯಾಸ ಪಂದ್ಯದ ವೇಳೆ ಕೊಹ್ಲಿಗೆ ತಾಗಿದ ಚೆಂಡು

ಟಿ-ಟ್ವಿಂಟಿ ವಿಶ್ವಕಪ್ ನಲ್ಲಿ ಭರವಸೆ ಮೂಡಿಸಿರುವ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ಹಾದಿಯಲ್ಲಿದೆ. ವಿರಾಟ್ ಕೊಹ್ಲಿಯಂತೂ ಫಾರ್ಮ್ ಗೆ ಮರಳಿದ್ದು ಅತ್ಯುತ್ತಮ ಆಟವಾಡುತ್ತಿದ್ದಾರೆ. ನವೆಂಬರ್ 10 ರಂದು (ಗುರುವಾರ) ಅಡಿಲೇಡ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ T20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್‌ ನಡೆಯಲಿದೆ.

ಅದಕ್ಕೆಂದೇ ಅಭ್ಯಾಸ ಮಾಡುತ್ತಿದ್ದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೆಟ್‌ನಲ್ಲಿ ಕೆಲವು ಕ್ಷಣ ನೋವಿನಲ್ಲಿದ್ದರು. ಹರ್ಷಲ್ ಪಟೇಲ್ ಎಸೆದ ಬಾಲ್ ಕೊಹ್ಲಿಯ ತೊಡೆಸಂದು ಜಾಗಕ್ಕೆ ಬಡಿಯಿತು. ಈ ವೇಳೆ ಅವರು ಕೆಲವು ಕ್ಷಣಗಳ ಕಾಲ ಮೊಣಕಾಲುಗಳ ಮೇಲೆ ಕೂತರು.

ಕೊಹ್ಲಿಗೆ ಬಾಲ್ ಬಡಿದು ನೋವಾದಂತೆ ಕಂಡರು. ಆದರೆ ಸ್ವಲ್ಪ ಸಮಯದ ನಂತರ ಅವರು ಮತ್ತೆ ಎದ್ದು ಮೊದಲಿನಂತೇ ಅಭ್ಯಾಸ ಪ್ರಾರಂಭಿಸಿದರು. ನೆಟ್ಸ್‌ನಲ್ಲಿ ಹಾಜರಿದ್ದ ಪತ್ರಕರ್ತರು ಕೊಹ್ಲಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿ ಮಾಡಿದ್ದರು. ಆದರೆ ಕೆಲವು ನಿಮಿಷಗಳ ನಂತರ ಕೊಹ್ಲಿ ಅವರು ಚೆನ್ನಾಗಿರುವಂತೆ ಕಂಡುಬಂದಿದ್ದಾರೆ.

ಗಾಯದ ಭೀತಿಯಿಂದ ಕೊಹ್ಲಿ ಚೇತರಿಸಿಕೊಂಡಿರುವಂತೆ ತೋರುತ್ತಿದ್ದು ದೊಡ್ಡ ಸೆಮಿಫೈನಲ್ ಘರ್ಷಣೆಗೆ ಮುಂಚಿತವಾಗಿ ಅವರ ಅಭಿಮಾನಿಗಳು ಚಿಂತಿಸಬೇಕಾಗಿಲ್ಲ ಎನ್ನಲಾಗಿದೆ.

ಇದಕ್ಕೂ ಒಂದು ದಿನದ ಮೊದಲು ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ಮಂಗಳವಾರ ನೆಟ್ಸ್‌ನಲ್ಲಿ ಗಾಯಗೊಂಡಿದ್ದರು. ರೋಹಿತ್ ನೆಟ್‌ನಲ್ಲಿ ಥ್ರೋಡೌನ್‌ಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಥ್ರೋಡೌನ್‌ಗಳಲ್ಲಿ ಒಂದು ಅವರ ಮುಂದೋಳಿನ ಮೇಲೆ ಬಿತ್ತು. ಆಗ ರೋಹಿತ್ ಶರ್ಮಾ ತುಂಬಾ ನೋವಿನಿಂದ ಮರಳಿದಂತೆ ಕಾಣುತ್ತಿದ್ದರು. ಫಿಸಿಯೊಥೆರಪಿಸ್ಟ್ ಅವರನ್ನು ಪರೀಕ್ಷಿಸಲು ಬಂದ ನಂತರ ರೋಹಿತ್ ನೆಟ್‌ ತೊರೆದು ಮತ್ತೆ ಬ್ಯಾಟಿಂಗ್ ಪ್ರಾರಂಭಿಸಿದರು.

ಗುರುವಾರದಂದು ಭಾರತದ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಆಡಲಿದೆ.

— Aru ★ (@Aru_Ro45) November 9, 2022

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...