T20 ವಿಶ್ವಕಪ್ 2022 ರ ಸೆಮಿಫೈನಲ್ ನಲ್ಲಿ ಸೋತ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕಪ್ ಗೆಲ್ಲುವ ಆಸೆಯನ್ನ ಅಂತ್ಯಗೊಳಿಸಿದೆ.
ಅಡಿಲೇಡ್ ಓವಲ್ನಲ್ಲಿ ನಡೆದ ಪಂದ್ಯಾವಳಿಯ ಎರಡನೇ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲಿನೊಂದಿಗೆ ಭಾರತ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ತಮ್ಮ ನಾಯಕತ್ವದಲ್ಲಿ ಐಸಿಸಿ ಪ್ರಶಸ್ತಿ ಗೆಲ್ಲಲು ಬಯಸಿದ್ದ ರೋಹಿತ್ ಆಸೆ ಈಡೇರದೇ ಕಣ್ಣೀರಲ್ಲಿ ಕೊನೆಯಾಯಿತು.
ಭಾರತವು ಕಪ್ ಗೆಲ್ಲದಿದ್ದರೂ ಬಹುಮಾನದ ಹಣದೊಂದಿಗೆ ಹಿಂತಿರುಗಿದೆ. ಸೆಮಿಫೈನಲ್ನಲ್ಲಿ ಸೋತ ಭಾರತಕ್ಕೆ ಬಹುಮಾನದ ಮೊತ್ತ ಸಿಗಲಿದೆ. ವಿಜೇತರಾದ ಎಲ್ಲಾ ಭಾಗವಹಿಸುವ ತಂಡಗಳಿಗೆ ಐಸಿಸಿ ಬಹುಮಾನದ ಹಣವನ್ನು ನೀಡುತ್ತಿದೆ.
ನವೆಂಬರ್ 13 ರಂದು ಮೆಲ್ಬೋರ್ನ್ನಲ್ಲಿ ನಡೆಯುವ ICC ಪುರುಷರ T20 ವಿಶ್ವಕಪ್ 2022 ನಲ್ಲಿ ವಿಜೇತ ತಂಡವು $ 1.6 ಮಿಲಿಯನ್ ಬಹುಮಾನವನ್ನು ಪಡೆಯುತ್ತದೆ ಎಂದು ಸೆಪ್ಟೆಂಬರ್ನಲ್ಲಿ ICC ಘೋಷಿಸಿತು. ರನ್ನರ್ ಅಪ್ ತಂಡ ಅರ್ಧದಷ್ಟು ಮೊತ್ತವನ್ನು ಪಡೆಯುತ್ತದೆ.
ಸೋತ ಸೆಮಿ-ಫೈನಲಿಸ್ಟ್ಗಳು ಒಟ್ಟು $5.6 ಮಿಲಿಯನ್ ಬಹುಮಾನದ ಮೊತ್ತದಿಂದ ತಲಾ $400,000 ಪಡೆಯಬೇಕಿತ್ತು. ಈ ಪ್ರಕಾರ ಸೆಮಿಫೈನಲ್ ತಲುಪಿದ ಭಾರತಕ್ಕೆ $400,000 ಸಿಕ್ಕಿದೆ. ಅಂದರೆ 3.22 ಕೋಟಿ ರೂ. ಸಿಕ್ಕಿದೆ. ಹೆಚ್ಚುವರಿಯಾಗಿ ಸೂಪರ್ 12 ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದ ಭಾರತಕ್ಕೆ 1.28 ಕೋಟಿ ರೂ ದಕ್ಕಿದೆ. ಅಂದರೆ ಭಾರತ ತನ್ನ ಟಿ20 ವಿಶ್ವಕಪ್ ಟೂರ್ನಿಯಿಂದ ಒಟ್ಟು 4.5 ಕೋಟಿ ರೂಪಾಯಿಯೊಂದಿಗೆ ಹಿಂದಿರುಗುತ್ತಿದೆ.