ಇಂದು ಮದ್ಯಾಹ್ನ ನಡೆದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವೆ ಟಿ ಟ್ವೆಂಟಿ ವಿಶ್ವಕಪ್ ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 171ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು ಗುರಿ ಬೆನ್ನತ್ತಿದ ಶ್ರೀಲಂಕಾ ತಂಡದಲ್ಲಿ ಆರಂಭಿಕ ಆಟಗಾರ ಕುಸಲ್ ಫೆರೆರಾ ಕೇವಲ 4ರನ್ ಗಳಿಸಿ ನಸುಮ್ ಅಹ್ಮದ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ಶ್ರೀಲಂಕಾ ತಂಡಕ್ಕೆ ಆಸರೆಯಾದ ಚರಿತ್ ಅಸಲಂಕಾ ಅರ್ಧಶತಕ ಗಳಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ಆಸರೆಯಾದರು.
ನವೆಂಬರ್ 12ರಂದು ತೆರೆ ಮೇಲೆ ಬರಲಿದೆ ‘ಟಾಮ್&ಜೆರ್ರಿ’
24 ವರ್ಷದ ಚರಿತ್ ಅಸಲಂಕಾ ಅವರ ಮೊದಲನೇ ಅರ್ಧಶತಕ ಇದಾಗಿದ್ದು ಸಂಭ್ರಮಿಸಿದ್ದಾರೆ, ಇದುವರೆಗೂ ಕೇವಲ 5 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಅಸಲಂಕಾ ಏಕದಿನ ಕ್ರಿಕೆಟ್ ನಲ್ಲೂ ಮಿಂಚುತ್ತಿದ್ದಾರೆ.