ಕೊರೋನಾದ ಅಬ್ಬರವೇನೋ ಕಡಿಮೆಯಾಗಿದೆ. ಆದ್ರೆ ಪೆಂಡಮಿಕ್, ಲಾಕ್‌ಡೌನ್‌ನಿಂದಾಗಿ ಮಕ್ಕಳು ಮೊಬೈಲ್ ಫೋನ್ ಮತ್ತು ಟಿವಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಅತಿಯಾಗಿ ಟಿವಿ ಮತ್ತು ಮೊಬೈಲ್ ವೀಕ್ಷಣೆಯಿಂದ ಮಕ್ಕಳ ದೃಷ್ಟಿ ಕುಂಠಿತವಾಗುತ್ತಿದೆ. ದೃಷ್ಟಿಶಕ್ತಿ ಕಡಿಮೆಯಾಗುವುದನ್ನು ತಡೆಯಬೇಕಾದರೆ ಮಕ್ಕಳು ಮೊಬೈಲ್ ಮತ್ತು ಟಿವಿಯಿಂದ ದೂರ ಉಳಿಯಬೇಕು. ಜೊತೆಗೆ ಮಕ್ಕಳಲ್ಲಿ ದೃಷ್ಟಿ ವರ್ಧನೆಗೆ ನೆರವಾಗುವಂತಹ ನಿರ್ದಿಷ್ಟ ಆಹಾರವನ್ನೂ ಕೊಡಬೇಕು.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಕಣ್ಣಿನ ಶಕ್ತಿ ಹೆಚ್ಚುತ್ತದೆ. ಪಾಲಕ್ ದೃಷ್ಟಿ ಹೆಚ್ಚಿಸಲು ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಮಕ್ಕಳು ಪಾಲಕ್ ಸೊಪ್ಪನ್ನು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಅದನ್ನು ದಾಲ್ ಅಥವಾ ಸೂಪ್ ರೂಪದಲ್ಲಿ ಕೊಡಬಹುದು.
ಬತುವಾ ಗ್ರೀನ್ಸ್: ಕನ್ನಡದಲ್ಲಿ ಇದನ್ನು ಋಷಿ ಎಲೆಗಳೆಂದು ಕರೆಯಲಾಗುತ್ತದೆ. ಈ ಸೊಪ್ಪು ಸಹ ಕಣ್ಣುಗಳಿಗೆ ಪ್ರಯೋಜನಕಾರಿ. ಇದರಲ್ಲಿ ಆ್ಯಂಟಿಒಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳಿವೆ. ಇದು ಕಣ್ಣಿನ ನರಗಳನ್ನು ಆರೋಗ್ಯವಾಗಿಡಲು ಮತ್ತು ಬೆಳಕನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಕ್ಕಳಿಗೆ ಈ ಸೊಪ್ಪನ್ನು ತಿನ್ನಿಸುವುದರಿಂದ ಅವರ ದೃಷ್ಟಿ ಮತ್ತು ಕಾರ್ನಿಯಾದ ಆರೋಗ್ಯ ಸುಧಾರಿಸುತ್ತದೆ.
ಗೆಣಸು: ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವ ತರಕಾರಿ. ಎಲ್ಲಾ ಕಡೆ ಸುಲಭವಾಗಿ ಸಿಗುತ್ತದೆ. ಲುಟೀನ್ ಮತ್ತು ವಿಟಮಿನ್-ಎ, ಸಿ ಗೆಣಸಿನಲ್ಲಿದೆ. ಇದರ ನಿಯಮಿತ ಸೇವನೆಯಿಂದ ದೃಷ್ಟಿ ಸುಧಾರಿಸುತ್ತದೆ. ಅದಕ್ಕಾಗಿಯೇ ಇದನ್ನು ಚಳಿಗಾಲದಲ್ಲಿ ನಿಯಮಿತವಾಗಿ ತಿನ್ನಬೇಕು. ಚಿಕ್ಕ ಮಕ್ಕಳಿಗೆ ಗೆಣಸು ತಿನ್ನಿಸುವಾಗ ಕೊಂಚ ಜಾಗರೂಕರಾಗಿರಿ. ಅದು ಗಂಟಲಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.
ಕ್ಯಾರೆಟ್: ಕಣ್ಣಿನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ತರಕಾರಿ ಇದು. ಕ್ಯಾರೆಟ್‌ನಲ್ಲಿ ವಿಟಮಿನ್-ಸಿ, ಆ್ಯಂಟಿಒಕ್ಸಿಡೆಂಟ್‌ಗಳು, ಲುಟೀನ್ ಮತ್ತು ಕ್ಯಾರೊಟಿನಾಯ್ಡ್‌ಗಳಂತಹ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಸಲಾಡ್ ರೂಪದಲ್ಲಿ ಕ್ಯಾರೆಟ್ ಅನ್ನು ಮಕ್ಕಳಿಗೆ ಕೊಡಬಹುದು. ಅಥವಾ ಜ್ಯೂಸ್ ಮಾಡಿ ಕೊಡಿ. ಇದಲ್ಲದೆ ಅಡುಗೆಗೂ ಕ್ಯಾರೆಟ್ ಅನ್ನು ಬಳಕೆ ಮಾಡಿ. ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಮೆದುಳು ಆರೋಗ್ಯಕರವಾಗಿರುತ್ತದೆ.
ಕ್ಯಾಪ್ಸಿಕಂ: ಕ್ಯಾಪ್ಸಿಕಂನಲ್ಲಿ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಹಾಗಾಗಿ ಇದು ಸಹ ದೃಷ್ಟಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದರಲ್ಲಿ ಹಸಿರು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ, ಇದು ಕಣ್ಣಿನ ಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಕ್ಕಳಿಗೆ ದಿನದ ಅಡುಗೆ ಅಥವಾ ಸಲಾಡ್ ರೂಪದಲ್ಲಿ ಕ್ಯಾಪ್ಸಿಕಂ ಅನ್ನು ತಿನ್ನಿಸಿ. ಇದರಿಂದ ಅವರ ಕಣ್ಣಿನ ಶಕ್ತಿಯು ಬಲಗೊಳ್ಳುತ್ತದೆ.