ಯಾವುದೇ ಎಲೆಕ್ಟ್ರಾನಿಕ್ ವಸ್ತುವನ್ನು ಸ್ವಚ್ಛಗೊಳಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಅದನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಇದರಿಂದ ಟಿವಿ ಪರದೆಯ ಮೇಲೆ ಗೀಚು ಬಿದ್ದು ಪರದೆ ಹಾಳಾಗುತ್ತದೆ. ಹಾಗೇ ಶಾಕ್ ಸರ್ಕ್ಯೂಟ್ ಆಗುವ ಸಂಭವವಿರುತ್ತದೆ. ಹಾಗಾಗಿ ಟಿವಿ ಪರದೆಯನ್ನು ಸ್ವಚ್ಛಗೊಳಿಸುವಾಗ ಸಲಹೆಯನ್ನು ಪಾಲಿಸಿ.
-ಟಿವಿ ಪರದೆಯನ್ನು ಕ್ಲೀನ್ ಮಾಡುವಾಗ ಟಿವಿಯನ್ನು ಆಪ್ ಮಾಡಿ ಕನೆಕ್ಷನ್ ತೆಗೆದುಹಾಕಿ, ಇದರಿಂದ ಶಾಕ್ ತಗುಲುವ ಸಂಭವ ಕಡಿಮೆಯಾಗುತ್ತದೆ.
-ಟಿ ವಿ ಪರದೆಯನ್ನು ಸ್ವಚ್ಛಗೊಳಿಸುವಾಗ ಮೈಕೋಫೈಬರ್ ಬಟ್ಟೆಯನ್ನು ಬಳಸಿ. ಈ ಬಟ್ಟೆಯನ್ನು ಒದ್ದೆ ಮಾಡದೆ ಟಿವಿ ಪರದೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ. ಇಲ್ಲವಾದರೆ ಸ್ವಲ್ಪ ಒದ್ದೆ ಮಾಡಿ ಒರೆಸಿ. ಆದರೆ ಬೇರೆ ಯಾವುದೇ ರೀತಿಯ ಬಟ್ಟೆಗಳನ್ನು ಬಳಸಬೇಡಿ. ಅದು ಟಿವಿ ಪರದೆಯನ್ನು ಹಾಳು ಮಾಡುತ್ತದೆ.
-ಟಿವಿ ಪರದೆಯ ಮೇಲಿರುವ ಕಲೆಗಳನ್ನು ತೆಗೆದುಹಾಕಲು ತುಂಬಾ ಒತ್ತಡ ಹಾಕಬೇಡಿ. ಒಂದು ವೇಳೆ ಒತ್ತಡ ಹಾಕದೆ ಕಲೆಯನ್ನು ಸುಲಭವಾಗಿ ತೆಗೆಯಲು ನೀರಿಲ್ಲಿ ಸ್ವಲ್ಪ ವಿನೆಗರ್ ಮಿಕ್ಸ್ ಮಾಡಿ ಅದರಲ್ಲಿ ಮೈಕೋಫೈಬರ್ ಬಟ್ಟೆಯನ್ನು ಅದ್ದಿ ಸ್ವಚ್ಛಗೊಳಿಸಿದರೆ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ.