ದೆವ್ವದ ಸಿನಿಮಾ ಅಥವಾ ಧಾರಾವಾಹಿ ನೋಡುತ್ತಿದ್ದರೆ ಸ್ವಲ್ಪ ಭಯವಾಗುವುದು ಸಹಜ, ಆದರೆ ಟಿವಿಯಲ್ಲಿ ಪ್ರಾಣಿಯನ್ನು ಕಂಡರೆ ನೀವು ಇನ್ನೂ ಭಯಪಡುತ್ತೀರಾ ? ಇಲ್ಲಿಬ್ಬರು ಸ್ನೇಹಿತರು ಟಿವಿ ನೋಡಿಕೊಂಡು ಮೂರ್ಖತನದ ಕೆಲಸ ಮಾಡಿದ್ದಾನೆ.
ಟಿವಿಯಲ್ಲಿ ಹುಲಿಯನ್ನು ನೋಡಿ ಇಬ್ಬರು ಸ್ನೇಹಿತರು ಭಯಭೀತರಾಗಿ ಟಿವಿಯನ್ನೇ ಒಡೆದು ಹಾಕಿದ್ದಾರೆ. ಇಬ್ಬರೂ ನೆಲದ ಮೇಲೆ ಆರಾಮವಾಗಿ ಕುಳಿತು ಟಿವಿ ವೀಕ್ಷಿಸುತ್ತಿರುವುದನ್ನು ನೀವು ವಿಡಿಯೊದಲ್ಲಿ ನೋಡಬಹುದು. ಇದೇ ವೇಳೆ ಟಿವಿಯಲ್ಲಿ ಟೈಗರ್ ಎಂಟ್ರಿಯಾಗಿದೆ. ಇದಾದ ನಂತರ ಗೆಳೆಯರಿಬ್ಬರೂ ವಿಚಿತ್ರ ಆ್ಯಕ್ಷನ್ ಮಾಡಿದ್ದಾರೆ. ಟಿವಿಯಲ್ಲಿ ಹುಲಿಯನ್ನು ನೋಡಿ ಸ್ನೇಹಿತರಿಬ್ಬರೂ ತುಂಬಾನೇ ಉದ್ವಿಗ್ನಗೊಂಡಿದ್ದಾರೆ.
ಅವರಲ್ಲೊಬ್ಬ ಅಲ್ಲಿ ಬಿದ್ದಿದ್ದ ಕೋಲನ್ನು ಎತ್ತಿಕೊಂಡು ಟಿವಿಯಲ್ಲಿ ಕಾಣುತ್ತಿದ್ದ ಹುಲಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಈ ಹುಚ್ಚುತನದಲ್ಲಿ ಟಿವಿಯೇ ಒಡೆದು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಕ್ಲಿಪ್ಸ್ ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇಬ್ಬರೂ ಹುಚ್ಚರಿರಬಹುದು, ಅಥವಾ ಫುಲ್ ಟೈಟಾಗಿದ್ದಾರೇನೋ ಅಂತೆಲ್ಲಾ ಕಮೆಂಟ್ ಬರ್ತಾ ಇದೆ.
https://www.instagram.com/p/Cbzvz1nFCZ-eOzYMLiJ_mnvqceaOwhX_OC0hVg0/