ಹಸಿವು ಕಡಿಮೆಯಾಗುವುದು, ಜ್ವರ, ಎದೆನೋವು, ತೂಕ ನಷ್ಟ ಇವೆಲ್ಲ ಕ್ಷಯರೋಗದ ಲಕ್ಷಣಗಳು. ಟಿಬಿ ಒಂದು ಸಾಂಕ್ರಾಮಿಕ ರೋಗ, ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕ್ಷಯರೋಗದಿಂದಾಗಿ 2018 ರಲ್ಲಿ ಸುಮಾರು 1.5 ದಶಲಕ್ಷ ಜನರು ಸಾವನ್ನಪ್ಪಿದ್ದಾರೆ.
ಮಾನವರ ಮರಣಕ್ಕೆ ಕಾರಣವಾಗುವ ಪ್ರಮುಖ 10 ಅಂಶಗಳಲ್ಲಿ ಕ್ಷಯರೋಗವೂ ಒಂದು. ಕ್ಷಯರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಸೋಂಕಿತ ವ್ಯಕ್ತಿಯಿಂದ ಕೆಮ್ಮು ಮತ್ತು ಸೀನುಗಳ ಮೂಲಕ ಬಿಡುಗಡೆಯಾಗುವ ಸೂಕ್ಷ್ಮ ಹನಿಗಳ ಮೂಲಕ ಹರಡುತ್ತವೆ.
ವೈದ್ಯರ ಪ್ರಕಾರ, ದುರ್ಬಲಗೊಂಡ ರೋಗನಿರೋಧಕ ಶಕ್ತಿ, ಮೂತ್ರಪಿಂಡ ಕಾಯಿಲೆ, ಅಪೌಷ್ಠಿಕತೆ, ನಡೆಯುತ್ತಿರುವ ಕ್ಯಾನ್ಸರ್ ಚಿಕಿತ್ಸೆಯಂತಹ ಕೆಲವು ಅಂಶಗಳು ಕ್ಷಯರೋಗವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಬೆನ್ನು ನೋವು ಕಾಣಿಸಿಕೊಳ್ಳಬಹುದು.
ನಿಮ್ಮ ಮೆದುಳನ್ನು ಆವರಿಸುವ ಪೊರೆಗಳಲ್ಲಿ ಊತ, ಮೂತ್ರಪಿಂಡದ ಸಮಸ್ಯೆ, ಹೃದಯ ಅಸ್ವಸ್ಥತೆ ಮುಂತಾದ ಖಾಯಿಲೆಗಳಿಗೂ ಕಾರಣವಾಗುವ ಸಾಧ್ಯತೆ ಇರುತ್ತದೆ. ಕ್ಷಯರೋಗಕ್ಕೆ ವೈದ್ಯಕೀಯ ಚಿಕಿತ್ಸೆಯ ಜೊತೆಜೊತೆಗೆ ನಿಯಮಿತವಾಗಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ನೀವು ಫಿಟ್ ಆಗಿರಲು ಗ್ರೀನ್ ಟೀ ಸಹಕರಿಸುತ್ತದೆ. ಕ್ಷಯರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಸಾಮರ್ಥ್ಯವನ್ನು ಗ್ರೀನ್ ಟೀ ಹೊಂದಿದೆ. ಇದನ್ನು ಎಪಿಗಲ್ಲೊಕ್ಯಾಟೆಚಿನ್ ಗ್ಯಾಲೇಟ್ (ಇಜಿಸಿಜಿ) ಎಂದು ಕರೆಯಲಾಗುತ್ತದೆ. ಇದು ಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಕ್ಷಯರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ತಳಿಗಳ ಬೆಳವಣಿಗೆಯನ್ನು ತಡೆಯುತ್ತದೆ.
ಪ್ರತಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗೆ ಅವುಗಳ ಬೆಳವಣಿಗೆ ಮತ್ತು ಸಂತಾನೋತ್ಪತ್ತಿಗೆ ಪೌಷ್ಠಿಕಾಂಶದ ಅಗತ್ಯವಿದೆ. ಕ್ಷಯರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ಸೆಲ್ಯುಲಾರ್ ಬೆಳವಣಿಗೆಗೆ ಅಗತ್ಯವಾದ ಶಕ್ತಿಯ ಪ್ರಮಾಣವನ್ನು ಸೀಮಿತಗೊಳಿಸುವ ಮೂಲಕ ಇಜಿಸಿಜಿ ಟಿಬಿಯನ್ನು ತಡೆಯಬಲ್ಲದು.