alex Certify ಟಿಎಂಸಿ ಹಲ್ಲೆಗೆ ಹೆದರಿ ಮನೆಬಿಟ್ಟು ಹೋದ ಬಿಜೆಪಿ ಕಾರ್ಯಕರ್ತ ವರ್ಷವಾಗುತ್ತಿದ್ದರೂ ಇನ್ನೂ ಸೇರಿಲ್ಲ ಮನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಎಂಸಿ ಹಲ್ಲೆಗೆ ಹೆದರಿ ಮನೆಬಿಟ್ಟು ಹೋದ ಬಿಜೆಪಿ ಕಾರ್ಯಕರ್ತ ವರ್ಷವಾಗುತ್ತಿದ್ದರೂ ಇನ್ನೂ ಸೇರಿಲ್ಲ ಮನೆ…!

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಸದಸ್ಯರ ಹಲ್ಲೆಗೆ ಹೆದರಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಮನೆ ಬಿಟ್ಟು ಓಡಿ ಹೋದವರು ಇದುವರೆಗೂ ಮನೆಗೆ ಹಿಂತಿರುಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮೇ 2, 2021ರಂದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಜಯಗಳಿಸಿದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣೋತ್ತರ ಹಿಂಸಾಚಾರದ ನಿದರ್ಶನಗಳು ವರದಿಯಾಗಿವೆ.

ಕಳೆದ ವರ್ಷ ಅರ್ಜಿದಾರರಾದ ಪ್ರಿಯಾಂಕಾ ತಿಬ್ರೆವಾಲ್ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ದಾಖಲಿಸಿದ ಪ್ರಕರಣದ ಪ್ರಕಾರ, ಫಲಿತಾಂಶದ ನಂತರ ಭುಗಿಲೆದ್ದ ಹಿಂಸಾಚಾರದ ಭಯದಿಂದ ಬಿಜೆಪಿಯ ಅನೇಕ ಬೆಂಬಲಿಗರು ಮತ್ತು ಕಾರ್ಯಕರ್ತರು ತಮ್ಮ ಮನೆಗಳನ್ನು ತೊರೆದು. ಸುಮಾರು ಒಂದು ವರ್ಷವಾದರೂ ಇನ್ನೂ ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಿಬ್ರೆವಾಲ್ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮನೆಯಿಂದ 303 ಮಂದಿ ಹೊರಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಶಂತನು ಸರ್ಕಾರ್ ಓರ್ವ ಮಾಜಿ ಸೇನಾ ಕ್ಲೆರಿಕಲ್ ಅಧಿಕಾರಿ ಮತ್ತು ಉತ್ತರ 24 ಪರಗಣದ ಕಂಕಿನಾರಾದಿಂದ ಬಿಜೆಪಿ ನಾಯಕ. ಚುನಾವಣಾ ಫಲಿತಾಂಶ ಪ್ರಕಟವಾದ ದಿನದಂದು ಅವರ ಮನೆಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ ನಂತರ ಪುನಃ ದಾಳಿಯಾಗಬಹುದೆಂದು ಹೆದರಿ ಮನೆ ತೊರೆದಿದ್ದಾರೆ. ಸರ್ಕಾರ್ ತನ್ನ ಹೆಂಡತಿ ರೀನಾ ಅವರೊಂದಿಗೆ ತನ್ನ ತವರು ಪಟ್ಟಣದಿಂದ ದೂರದಲ್ಲಿರುವ ಎರಡು ಕೊಠಡಿಯ ಬಾಡಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...