ಟಾಯ್ಲೆಟ್ ಕಮೋಡ್ ಗಳ ಸೀಟ್‌ನಲ್ಲಿ ಲಿಡ್ ಯಾವಾಗಲೂ ಕೆಳಕ್ಕಿರುತ್ತದೆ. ಇದಕ್ಕೆ ಏನು ಕಾರಣ? ಮೊದಲನೆಯದು, ಪಾಟ್ ಮುಚ್ಚುವುದಾಗಿದೆ. ನಾವ್ಯಾರೂ ಆ ಮುಚ್ಚಿದ ಲಿಡ್ ಅನ್ನು ಮೇಲಕ್ಕೆತ್ತುವುದೇ ಇಲ್ಲ, ಕಾರಣ, ಏನಾದರೂ ಅಸಹ್ಯ ಅದರ ಅಡಿಯಲ್ಲಿರಬಹುದು ಎಂಬ ಭಯ.
ಟಾಯ್ಲೆಟ್ ಲಿಡ್ ಮುಚ್ಚುವುದು ಶೌಚಾಲಯ ಶಿಷ್ಟಾಚಾರದ ಭಾಗವೂ ಹೌದು. ಇದರ ಹೊರತಾಗಿ ಲಿಡ್ ಕೆಳಕ್ಕಿರುವುದಕ್ಕೆ ಇನ್ನೂ ಕೆಲ ಕಾರಣಗಳಿವೆ. ನೋಡೋಣ ಬನ್ನಿ.
ಟಾಯ್ಲೆಟ್ ಲಿಡ್ ಅನ್ನು ತೆರೆದು ನೀವು ಫ್ಲಶ್ ಮಾಡಿದರೆ, ಶೌಚಾಲಯದಿಂದ ಹಾನಿಕಾರಕ ಬ್ಯಾಕ್ಟೀರಿಯಾ ಮೇಲಕ್ಕೆ ಹಾರಿ ವಾತಾವರಣಕ್ಕೆ ಬರುತ್ತವೆ ಎಂಬುದು ನಿಮಗೆ ಗೊತ್ತಾ? ಅದು ಭೇದಿಗೆ ಕಾರಣವಾಗುತ್ತದೆ ಎಂದು 2012ರ ಬ್ರಿಟಿಷ್ ಆಸ್ಪತ್ರೆಯ ಅಧ್ಯಯನವೊಂದು ಹೇಳಿದೆ. ಹಾಗಾಗಿ ಫ್ಲಶ್ ಮಾಡುವಾಗ ಲಿಡ್ ಯಾವಾಗಲೂ ಕೆಳಕ್ಕಿರಬೇಕು.
ಲಿಡ್ ಮುಚ್ಚಿರುವುದರಿಂದ ನಿಮ್ಮ ಬಾತ್‌ರೂಂ ಸ್ವಚ್ಛವಾಗಿ ಕಾಣುತ್ತದೆ ಹಾಗೂ ಟಾಯ್ಲೆಟ್ ನ ಅಹಿತಕರವಾದ ಕಲೆಗಳು ಕಾಣಿಸುವುದಿಲ್ಲ. ಸಾಕು ಪ್ರಾಣಿಗಳಿಗೆ ಟಾಯ್ಲೆಟ್ ಎಂದರೆ ಪ್ರೀತಿ. ಲಿಡ್ ತೆಗೆದಿಟ್ಟರೆ ಅವುಗಳು ಏರಿ ಒಳಕ್ಕಿಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಲಿಡ್ ಮುಚ್ಚಿದಾಗ ಅದನ್ನು ತಡೆಯಬಹುದು.