ಪದೇ ಪದೇ ಟಾಯ್ಲೆಟ್ ಕ್ಲೀನ್ ಮಾಡುವುದು ತಲೆ ನೋವಿನ ವಿಚಾರವೇ ಸರಿ. ಪ್ರತಿ ಬಾರಿ ಫ್ಲಶ್ ಮಾಡುವಾಗ ಟಾಯ್ಲೆಟ್ ಸ್ವಚ್ಚವಾಗಿಡಲು ಮಾರುಕಟ್ಟೆಯಲ್ಲಿ ದುಬಾರಿ ಲಿಕ್ವಿಡ್ ಗಳು ಲಭ್ಯವಿವೆ.
ಆದ್ರೆ ನಿತ್ಯ ಟಾಯ್ಲೆಟ್ ಕ್ಲೀನ್ ಮಾಡಲು ನೀವು ಇಂಥದೊಂದು ಐಡಿಯಾ ಉಪಯೋಗಿಸಿದರೆ ಬೇಗ ಕೊಳೆಯಾಗುವುದಿಲ್ಲ.
ಬಟ್ಟೆ ಒಗೆಯಲು ನೀವು ಉಪಯೋಗಿಸುವ ಮಾರ್ಜಕಗಳು ಅಂದರೆ ಸೋಪುಗಳನ್ನು ಬಳಸಿ ಅವು ಕರಗಿ ಚಿಕ್ಕ ಬಿಲ್ಲೆಗಳಾದಾಗ ಎಸೆಯುವ ಬದಲು ನಿಮ್ಮ ಟಾಯ್ಲೆಟ್ ಕಮೋಡ್ ಗೆ ಹಾಕಿ.
ಇದರಿಂದ ಪ್ರತಿ ಫ್ಲಶ್ ನಲ್ಲೂ ಸಾಬೂನಿನ ನೊರೆಯಿಂದಾಗಿ ಬಹಳ ಬೇಗ ನಿಮ್ಮ ಟಾಯ್ಲೆಟ್ ಕೊಳೆಯಾಗುವುದು ತಪ್ಪುತ್ತದೆ.