ಈ ಸೆಲ್ಫಿ ಗೀಳು ಯಾರನ್ನೂ ಬಿಟ್ಟಿಲ್ಲ ಅನಿಸುತ್ತದೆ. ಕೆಲವೊಂದು ಅಪಾಯದ ಎಚ್ಚರಿಕೆ ಇದ್ದರೂ ಕೂಡ ಯುವಜನತೆ ಮಾತ್ರ ಅದ್ಯಾವುದನ್ನು ಲೆಕ್ಕಿಸದೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದು, ಪ್ರಾಣಾಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ವೈರಲ್ ಆಗಿರೋ ವಿಡಿಯೋ ಕೂಡ ಇಂಥದ್ದೇ. ಒಂದೆಡೆ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದರೆ ಜನರು ಅದರ ಸಮೀಪದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಹಲವಾರು ಮಂದಿ ಜ್ವಾಲಾಮುಖಿ ಹತ್ತಿರ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿದಾರೆ. ಸ್ಫೋಟ ಸಂಭವಿಸುತ್ತಿರುವ ಬೆಟ್ಟದ ಸಮೀಪದಲ್ಲಿ ಜನರು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ವೈರಲ್ ಹಾಗ್ ಪೋಸ್ಟ್ ಮಾಡಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ವಿಡಿಯೋದಲ್ಲಿ, ಜನರ ಗುಂಪು ಸ್ಫೋಟದ ಸ್ಥಳದ ಸಮೀಪದಲ್ಲಿ ನಿಂತು ವಿಡಿಯೋ ಮತ್ತು ಫೋಟೋಗಳನ್ನು ಸೆರೆಹಿಡಿಯುವುದನ್ನು ಕಾಣಬಹುದು. ಈ ವೇಳೆ ಲಾವಾ ಕೆಳಮುಖವಾಗಿ ಹರಿಯಲು ಪ್ರಾರಂಭಿಸುತ್ತದೆ. ಕೆಲವು ಪ್ರವಾಸಿಗರು ಸುರಕ್ಷಿತ ಸ್ಥಳಕ್ಕೆ ಹಿಂತಿರುಗಿದ್ರೆ, ಇತರರು ಮಾತ್ರ ಸೆಲ್ಫಿ ಕ್ಲಿಕ್ಕಿಸುವಲ್ಲಿ ಬ್ಯುಸಿಯಾದ್ರು.
ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಪ್ರವಾಸಿಗರ ವರ್ತನೆಗೆ ಸಿಡಿಮಿಡಿಗೊಂಡಿದ್ದಾರೆ. ಫೋನ್ ಅನ್ನು ನಿಮ್ಮ ಜೇಬಿನಲ್ಲಿಟ್ಟು ಅಲ್ಲಿಂದ ಓಡಿ ಹೋಗಿ ಪಾರಾಗಿ ಎಂದು ಬಳಕೆದಾರರು ಬರೆದಿದ್ದಾರೆ.