alex Certify ಜ್ವರದ ಸುಸ್ತು ನಿವಾರಿಸಲು ಬೆಸ್ಟ್ ಈ ‘ಜ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರದ ಸುಸ್ತು ನಿವಾರಿಸಲು ಬೆಸ್ಟ್ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ ಜ್ಯೂಸ್ ಗಳನ್ನು ಸೇವಿಸಿ.

* ಕಿತ್ತಳೆ ಅಥವಾ ಮೂಸಂಬಿಯಲ್ಲಿ ವಿಟಮಿನ್‌ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಜ್ಯೂಸ್ ಸಹಕಾರಿಯಾಗಿದೆ.

* 1 ಬೀಟ್‌ ರೂಟ್‌, 3 ಕ್ಯಾರೆಟ್‌, 1 ಕಿತ್ತಳೆ, 2 ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ, ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ರುಬ್ಬಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

* ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್‌ ಜೊತೆ 2 ಪುದೀನಾ ಎಲೆ ಹಾಕಿ ಜ್ಯೂಸ್‌ ಮಾಡಿ ಕುಡಿದರೆ ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿ ಫ್ರೂಟ್‌ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚುವಂತೆ ಮಾಡುತ್ತದೆ.

* ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುತ್ತದೆ.

* ಸೇಬು, ಕ್ಯಾರೆಟ್ ಮತ್ತು ಆರೆಂಜ್ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್ ಕುಡಿದರೆ ಸುಸ್ತು ನಿವಾರಣೆಯಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...