ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಮುಗ್ಧರಂತೆ ಸೋಗು ಹಾಕಿಕೊಂಡ ಕಳ್ಳರು ಎಲ್ಲಿ ಯಾವಾಗ ಏನು ಸಾಗಣೆ ಮಾಡ್ತಾರೆ ಅನ್ನೋದನ್ನ ಕಂಡುಹಿಡಿಯೋದೆ ಕಷ್ಟ. ಇಂಥದ್ದೊಂದು ಘಟನೆ ಮತ್ತೆ ನಡೆದಿದೆ.
ಮಂಗಳವಾರ ಶಾರ್ಜಾದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕ, ಜ್ಯೂಸರ್ ಯಂತ್ರದೊಳಗೆ ಚಿನ್ನದ ರಾಡ್ ಕಳ್ಳ ಸಾಗಾಣಿಕೆ ಮಾಡಿದ್ದಾನೆ.
ಮತಾಂತರ ನಿಷೇಧ ಕಾಯ್ದೆ: ಧರ್ಮದ ಹಕ್ಕುಗಳನ್ನು ಮೊಟಕುಗೊಳಿಸುವುದು ನಮ್ಮ ಉದ್ದೇಶವಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ
ತನಿಖೆ ವೇಳೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರೋ ಪ್ರಯಾಣಿಕನನ್ನ, ಏರ್ಪೋರ್ಟ್ ನ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ವಿಚಾರಿಸಿದಾಗ ಮ್ಯಾನುಯಲ್ ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಅಡಗಿಸಿದ್ದು ಪತ್ತೆಯಾಗಿದೆ.
ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಉತ್ತರ ಪ್ರದೇಶದ ಮೂಲದ ಈ ವ್ಯಕ್ತಿಯನ್ನ ಬಂಧಿಸಿರೊ ಕಸ್ಟಮ್ಸ್ ಅಧಿಕಾರಿಗಳು, ಬಂಧಿತನಿಂದ 930 ಗ್ರಾಂ ತೂಕದ 45 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ಸದ್ಯ ಈ ವ್ಯಕ್ತಿಯನ್ನ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.