ಸೋಶಿಯಲ್ ಮೀಡಿಯಾದಲ್ಲಿ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಅಲ್ಲಿ ಮಹಿಳೆಯೊಬ್ಬಳು ವಿಚಿತ್ರವಾದ ತಂತ್ರವನ್ನು ಬಳಸಿಕೊಂಡು ಆಭರಣ ಅಂಗಡಿಯಿಂದ ಚಿನ್ನವನ್ನು ಕದ್ದಿದ್ದಾಳೆ.
ಜ್ಯುವೆಲ್ಲರಿ ಶಾಪ್‌ನಲ್ಲಿ ಇಬ್ಬರು ಮಹಿಳೆಯರು ಕುಳಿತುಕೊಂಡಿದ್ದು, ವ್ಯಕ್ತಿಯೊಬ್ಬ ಚಿನ್ನಾಭರಣಗಳನ್ನು ತೋರಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕಪ್ಪು ಸೂಟ್ ಧರಿಸಿದ ಮಹಿಳೆ ಕೆಲವು ನೆಕ್ಲೇಸ್ಗಳು ಮತ್ತು ಕಿವಿಯೋಲೆಗಳನ್ನು ನೋಡುತ್ತಿದ್ದಾಳೆ.
ಅಂಗಡಿಯಲ್ಲಿ ಆ ವ್ಯಕ್ತಿ ಇತರ ಗ್ರಾಹಕರನ್ನು ಭೇಟಿ ಮಾಡುವಲ್ಲಿ ನಿರತನಾಗಿದ್ದ. ಈ ವೇಳೆ ಮಹಿಳೆ ಒಂದು ಚಿಕ್ಕ ಚಿನ್ನದ ತುಂಡನ್ನು ತನ್ನ ಬಾಯಿಗೆ ಹಾಕಿದ್ದಾಳೆ. ಮಹಿಳೆ ಚಿನ್ನಾಭರಣ ನುಂಗಿದಾಳೋ ಅಥವಾ ಬಾಯಿಯಲ್ಲಿ ಬಚ್ಚಿಟ್ಟಿದ್ದಾಳೋ ಎಂಬುದು ಸ್ಪಷ್ಟವಾಗಿಲ್ಲ.
ವಿಡಿಯೋವನ್ನು ಇನ್ಸ್ಟಾಗ್ರಾಂನ ಮೆಮೆ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇದು ಹಲವಾರು ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ. ಈ ವಿಡಿಯೋ ಅಂಗಡಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಯಲ್ಲಿದೆ. ಎಷ್ಟು ಜಾಣ್ಮೆಯಿಂದ ಚಿನ್ನವನ್ನು ಆಕೆ ಎಸ್ಕೇಪ್ ಮಾಡಿದ್ದಾಳೆ ಎಂಬುದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಚಿನ್ನಾಭರಣಗಳನ್ನು ನುಂಗಿದ ಆಕೆಯ ತಂತ್ರ ನೆಟ್ಟಿಗರಿಗೆ ತಮಾಷೆಯಾಗಿ ಕಂಡಿದೆ.