ಬಾಲಕನೊಬ್ಬ ಸೀನಿದಾಗ ಆತನ ಮೂಗಿನಿಂದ ಐದು ಪೆನ್ಸ್ ನಾಣ್ಯವು ಹೊರಬಿದ್ದಿರೋ ಘಟನೆ ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದಿದೆ. ಆಘಾತಕಾರಿ ವಿಷಯವೇನೆಂದರೆ, ನಾಣ್ಯವು ಸುಮಾರು 10 ವರ್ಷಗಳಿಂದ ಆತನ ಮೂಗಿನ ಹೊಳ್ಳೆಯೊಳಗೆ ಸಿಲುಕಿಕೊಂಡಿತ್ತಂತೆ..!
14 ವರ್ಷ ವಯಸ್ಸಿನ ಉಮೈರ್ ಕಮರ್ ಎಂಬ ಬಾಲಕ ಚಿಕ್ಕವನಿದ್ದಾಗ ಮೂಗಿನ ಮೇಲೆ ನಾಣ್ಯವನ್ನು ತಳ್ಳಿರೋ ಅಸ್ಪಷ್ಟ ಸ್ಮರಣೆಯನ್ನು ಹೊಂದಿದ್ದಾನೆ. ಆದರೆ ನಂತರ ವಿಪರೀತ ಮೂಗು ನೋಯಲು ಶುರುವಾದ್ದರಿಂದ ವೈದ್ಯರನ್ನು ಕಾಣಬೇಕಾಯಿತು. ಆದರೆ, ನಾಣ್ಯ ಮಾತ್ರ ಕಂಡುಬಂದಿಲ್ಲ.
ದಕ್ಷಿಣ ಲಂಡನ್‌ನ ಕ್ರೊಯ್ಡಾನ್‌ನ ಉಮೈರ್ ಜೂನ್ 19 ರಂದು ಮೂಗಿನ ನೋವು ಬಗ್ಗೆ ತನ್ನ ತಾಯಿಯಲ್ಲಿ ಹೇಳಿಕೊಂಡಿದ್ದಾನೆ. ಗಟ್ಟಿಯಾಗಿ ಮೂಗಿನಿಂದ ಉಸಿರಾಡುವಂತೆ ತಾಯಿ ಸಲಹೆ ನೀಡಿದ್ದಾಳೆ. ತಾಯಿಯ ಮಾತನ್ನು ಅನುಸರಿಸಿದ ಬಾಲಕನ ಆಶ್ಚರ್ಯಕ್ಕೆ, ಐದು ಪೆನ್ಸ್ ನಾಣ್ಯವು ಮೂಗಿನಿಂದ ಹೊರಬಿದ್ದಿದೆ.
ಅಂದಹಾಗೆ, ಈ ರೀತಿಯ ಪ್ರಕರಣ ಇದೇ ಮೊದಲು ನಡೆದಿರೋದಲ್ಲ. ಲಂಡನ್‌ನ ಗೈಸ್ ಮತ್ತು ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞರಾಗಿರುವ ಡಾ. ಕ್ಲೇರ್ ಹಾಪ್ಕಿನ್ಸ್, ಮಕ್ಕಳು ತಮ್ಮ ಮೂಗಿನ ಹೊಳ್ಳೆಗಳಿಗೆ ವಸ್ತುಗಳನ್ನು ಸೇರಿಸುವ ಮೋಹವನ್ನು ಹೊಂದಿದ್ದಾರೆ ಎಂದು ವಿವರಿಸಿದ್ರು. ಹಾಗಾಗಿ ನಿಮ್ಮ ಮನೆಯಲ್ಲೂ ಪುಟ್ಟ ಮಕ್ಕಳಿದ್ರೆ ನಾಣ್ಯಗಳಿಂದ ಅವರನ್ನು ದೂರವಿಟ್ಟು, ಎಚ್ಚರಿಕೆಯಿಂದ ನೋಡಿಕೊಳ್ಳುವುದು ಉತ್ತಮ.