ಅನಗತ್ಯ ಬೊಜ್ಜಿನಿಂದ ನಮ್ಮ ದೇಹ ಸೌಂದರ್ಯ ಹಾಳಾಗುವುದು ಮಾತ್ರವಲ್ಲ, ಅದು ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಲಾಕ್ ಡೌನ್ ನ ಈ ಸಮಯದಲ್ಲಿ ಮನೆಯಲ್ಲೇ ಕುಳಿತು ಈ ಸಮಸ್ಯೆಯನ್ನು ಬಗೆಹರಿಸಬಹುದು.
ತೊಡೆಯ ಭಾಗದಲ್ಲಿರುವ ಬೊಜ್ಜು ಅಥವಾ ಜೋತುಬಿದ್ದ ಹೊಟ್ಟೆಯನ್ನು ಕರಗಿಸುವ ಔಷಧ ಇಲ್ಲಿದೆ. ಅದನ್ನು ಸಿದ್ಧಪಡಿಸಿಕೊಳ್ಳುವ ವಿಧಾನ ತಿಳಿಯೋಣ.
ಒಂದು ಗ್ಲಾಸ್ ನೀರಿಗೆ ಎರಡು ಚಮಚದಷ್ಟು ಓಂ ಕಾಳು ಹಾಕಿ ನೆನೆಯಲು ಬಿಡಿ. ರಾತ್ರಿ ನೀರಿನಲ್ಲಿ ನೆನೆಯಲು ಬಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿರುವ ಕೆಟ್ಟ ಬೊಜ್ಜಿನ ಅಂಶ ಸಂಪೂರ್ಣ ಕರಗುತ್ತದೆ.
ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಇದನ್ನು ಸೇವಿಸಬಹುದು. ಇದಕ್ಕೆ ತುಸು ಜೀರಿಗೆ ಬೆರೆಸಿ ಕುದಿಸಿ ಕುಡಿಯುವುದರಿಂದ ಹೊಟ್ಟೆನೋವು, ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತದೆ.
ನೀವು ಬೆಳಗಿನ ತಿಂಡಿ ತಿನ್ನುವ ಮೊದಲು ಇದನ್ನು ಕುಡಿಯುವುದು ಒಳ್ಳೆಯದು. ಸಂಜೆಯ ಹೊತ್ತು ಟೀ ಕುಡಿಯುವ ಬದಲು ಇದನ್ನು ಸೇವಿಸಬಹುದು. ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಕುಡಿಯುವುದರಿಂದ ಜೋತು ಬಿದ್ದ ಹೊಟ್ಟೆಯ ಬೊಜ್ಜು ಮತ್ತು ಸೊಂಟದ ಬೊಜ್ಜು ಕರಗುತ್ತದೆ.