ಇಂದಿನ ಯುವಕರಿಗೆ ಸ್ಪೂರ್ತಿಯಾಗುವಂತಹ ಘಟನೆ ಇದು. ಚಿಕ್ಕ ವಯಸ್ಸಿನಲ್ಲೇ ಮನೆಯ ಸಂಪೂರ್ಣ ಜವಾಬ್ಧಾರಿ ಹೊತ್ತಿರೋ ಬಾಲಕನ ಕಥೆ. ಕೇವಲ 7 ವರ್ಷದ ಬಾಲಕನೊಬ್ಬ ಜೊಮೆಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ.
ಈತನ ತಂದೆ ಜೊಮೆಟೋ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ರು. ಆದ್ರೆ ಅಪಘಾತದಲ್ಲಿ ಗಾಯಗೊಂಡು ಆತ ಹಾಸಿಗೆ ಹಿಡಿದಿದ್ದಾರೆ. ಅಪ್ಪನ ಜವಾಬ್ಧಾರಿಯನ್ನೀಗ 7 ವರ್ಷದ ಪುಟ್ಟ ಬಾಲಕ ನಿಭಾಯಿಸುತ್ತಿದ್ದಾನೆ. ಬೆಳಗ್ಗೆ ಶಾಲೆಗೆ ಹೋಗುತ್ತಾನೆ.
ಸಂಜೆ 6 ಗಂಟೆಯಿಂದ 11 ಗಂಟೆವರೆಗೆ ಸೈಕಲ್ನಲ್ಲಿ ಜೊಮೆಟೋ ಫುಡ್ ಡೆಲಿವರಿಯನ್ನು ಮನೆಮನೆಗೂ ತಲುಪಿಸ್ತಾನೆ. ರಾಹುಲ್ ಮಿತ್ತಲ್ ಎಂಬುವವರು ಬಾಲಕನ ಜೊತೆಗೆ ನಡೆಸಿದ ಸಂಭಾಷಣೆಯ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬಾಲಕನ ಹೆಸರು, ಮತ್ತಿತರ ವಿವರಗಳು ಲಭ್ಯವಾಗಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ಇಷ್ಟು ಚಿಕ್ಕ ವಯಸ್ಸಿನಲ್ಲೇ ಸೈಕಲ್ ತುಳಿದುಕೊಂಡು ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ ಬಾಲಕನನ್ನು ನೋಡಿ ಮರುಗಿದ್ದಾರೆ. ಇನ್ನು ಕೆಲವರು ಆತನ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಜೊಮೆಟೋ ಕೇರ್ ಸಹ ಇದಕ್ಕೆ ಪ್ರತಿಕ್ರಿಯಿಸಿದ್ದು, ಬಾಲಕನ ತಂದೆಯ ವಿವರಗಳನ್ನು ಶೇರ್ ಮಾಡುವಂತೆ ಕೇಳಿದೆ.